ಚಾಮರಾಜನಗರ:ನಾನು ಹುಚ್ಚ, ನಾನೇ ಬೇರೆ ನನ್ನ ದಾರಿನೇ ಬೇರೆ, ನನ್ನ ಸ್ಟೈಲೇ ಬೇರೆ ಎಂದು ವಸತಿ ಸಚಿವ ಸೋಮಣ್ಣ ಮಾರ್ಮಿಕವಾಗಿ ಹೇಳಿದರು.
ನಾನು ಹುಚ್ಚ, ನಾನೇ ಬೇರೆ-ನನ್ನ ಸ್ಟೈಲೇ ಬೇರೆ: ಸಚಿವ ಸೋಮಣ್ಣ - ವಸತಿ ಸಚಿವ ಸೋಮಣ್ಣ
ಚಾಮರಾಜನಗರ ಜಿಲ್ಲೆಗೆ ಉಸ್ತುವಾರಿ ಆಗುವ ಆಸೆ ಇಲ್ಲ. ಚಾಮರಾಜನಗರದ ಮೇಲೆ ನನಗೆ ಅಭಿಮಾನ ಹೆಚ್ಚು ಅಷ್ಟೇ. ಹನೂರಿನ ಕಾಂಗ್ರೆಸ್ ಶಾಸಕ ನರೇಂದ್ರ ಚಿಂತಿಸಬೇಕಿಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಮಾಧ್ಯಮದವರು ಮತ್ತೇ ಚಾಮರಾನಗರದ ಉಸ್ತುವಾರಿ ಆಗುತ್ತೀರಾ ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ಸಚಿವ ಸುರೇಶ್ ಕುಮಾರ್ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಟೈಲೇ ಬೇರೆ, ನನ್ನ ಸ್ಟೈಲೇ ಬೇರೆ. ಸಿಎಂ ಯಡಿಯೂರಪ್ಪ ಕೆಲಸ ಕೊಟ್ಟಿದ್ದು, ಅದನ್ನು ಚೆನ್ನಾಗಿ ಮಾಡುತ್ತಿದ್ದೇನೆ. ಮುಂದೇನು ಎಂದು ಗೊತ್ತಿಲ್ಲವೆಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಉಸ್ತುವಾರಿ ಆಗುವ ಆಸೆ ಇಲ್ಲ, ಚಾಮರಾಜನಗರದ ಮೇಲೆ ನನಗೆ ಅಭಿಮಾನ ಹೆಚ್ಚು ಅಷ್ಟೇ. ಕೊಡಗಿನ ಉಸ್ತುವಾರಿಯಾಗಿ ಪ್ರಾಕೃತಿಕ ವಿಕೋಪ ಎದುರಿಸಿದ ಬಳಿಕ ಯಾವುದೇ ಜಿಲ್ಲೆಗೆ ಹೋದರೂ ಕೆಲಸ ಮಾಡುವ ಧೈರ್ಯ ಬಂದಿದೆ. ಚಾಮರಾಜನಗರಕ್ಕೆ ಬರುವ ಯೋಚನೆ ಸದ್ಯಕ್ಕಿಲ್ಲ, ಹನೂರಿನ ಕಾಂಗ್ರೆಸ್ ಶಾಸಕ ನರೇಂದ್ರ ಚಿಂತಿಸಬೇಕಿಲ್ಲ ಎಂದು ಸಚಿವ ಸೋಮಣ್ಣ ಹೇಳಿದರು.