ಚಾಮರಾಜನಗರ :ಕೇರಳ ವ್ಯಾಪಾರಿಯನ್ನು ಅಪಹರಿಸಿ ಹಣ ಕಿತ್ತಿರುವ ಸಿನಿಮೀಯ ಶೈಲಿಯ ದರೋಡೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕೋಟೆಕೆರೆ ಎಂಬಲ್ಲಿ ತಡರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.
ಕೇರಳ ಮೂಲದ ಹರ್ಷದ್ ಅಲಿ ಎಂಬುವರು ಹಣ ಕಳೆದುಕೊಂಡಿದ್ದಾರೆ. ಇವರು ಕೋಟೆಕೆರೆ ಸಮೀಪ ಚಿಪ್ಸ್ ಕಾರ್ಖಾನೆ ನಡೆಸುತ್ತಿದ್ದಾರೆ. ಎಂದಿನಂತೆ ತನ್ನ ವ್ಯಾಪಾರ ಮುಗಿಸಿಕೊಂಡು ಕೋಟೆಕೆರೆಗೆ ಹಿಂತಿರುಗುವಾಗ ಮೂರು ಕಾರಿನಲ್ಲಿ ಬಂದ ಎಂಟು ಜನರ ತಂಡ, ಅವರ ಕಾರಿನ ಮೇಲೆ ರಾಡಿನಿಂದ ದಾಂಧಲೆ ನಡೆಸಿ ಕಾರಿನಲ್ಲಿದ್ದ ಹರ್ಷದ್ ಅಲಿ ಹಾಗೂ ಸ್ನೇಹಿತ ಚಿನ್ನಸ್ವಾಮಿ ಅವರಿಗೆ ಖಾರದ ಪುಡಿ ಎರಚಿ ಇಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.