ಕೊಳ್ಳೇಗಾಲ :ಅತೀ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಯುವಕ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಪಟ್ಟಣದ ಚೌಡೇಶ್ವರಿ ಶಾಲೆಯ ರಸ್ತೆಯಲ್ಲಿ ಜರುಗಿದೆ.
ಪಟ್ಟಣದ ದೊಡ್ಡ ನಾಯಕರ ಬೀದಿಯ ನಿವಾಸಿ ಕುಮಾರ್ ಎಂಬುವರ ಮಗ ಅರುಣ್ (22) ಎಂಬಾತ ಮೃತ ದುರ್ದೈವಿ. ಯುವಕ ಪಟ್ಟಣದ ಚೌಡೇಶ್ವರಿ ಶಾಲೆಯ ರಸ್ತೆಯಲ್ಲಿ ಅತೀ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಆಯಾತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.