ಚಾಮರಾಜನಗರ :ಬೆಳಗ್ಗೆಯಿಂದಲೇ ಜಿಲ್ಲಾದ್ಯಂತ ಮಳೆಯಾಗುತ್ತಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಗಡಿಜಿಲ್ಲೆಯಲ್ಲಿ ರಚ್ಚೆ ಹಿಡಿದ ಮಳೆ: ಮಲೆಮಹದೇಶ್ವರ ಬೆಟ್ಟದ ಗುಡ್ಡ ಕುಸಿದು ಸಂಚಾರ ತಡೆ! - Malai Mahadeswara hill
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸಾಧಾರಣ ಮಳೆಯಾಗಿದ್ದು, ಯಳಂದೂರು, ಸಂತೇಮರಹಳ್ಳಿ, ಗುಂಡ್ಲುಪೇಟೆಯಲ್ಲಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಬಂಡೀಪುರ ಅರಣ್ಯ ಪ್ರದೇಶವಂತೂ ಹೊಳೆಯಂತಾಗಿದೆ.
ಚಾಮರಾಜನಗರದಲ್ಲಿ ಭಾರಿ ಮಳೆ
ಚಾಮರಾಜನಗರ ಜಿಲ್ಲಾಕೇಂದ್ರ, ಕೊಳ್ಳೇಗಾಲದಲ್ಲಿ ಸಾಧಾರಣ ಮಳೆಯಾಗಿರುವುದನ್ನು ಹೊರತುಪಡಿಸಿ ಯಳಂದೂರು, ಸಂತೇಮರಹಳ್ಳಿ, ಗುಂಡ್ಲುಪೇಟೆಯಲ್ಲಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಇನ್ನು ಬಂಡೀಪುರ ಅರಣ್ಯ ಪ್ರದೇಶವಂತೂ ಹೊಳೆಯಂತಾಗಿದೆ.
ಸಂಜೆ 4 ರಿಂದ ಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾರೀ ಮಳೆಯಾಗುತ್ತಿತ್ತು, ಮಳೆಯ ನಡುವೆಯೂ ಚಿನ್ನದ ರಥ ಸೇವೆ ನಡೆದಿದೆ ಎಂದು ತಿಳಿದುಬಂದಿದೆ. ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಗಿತ್ತು ಎಂದು ತಿಳಿದುಬಂದಿದೆ.