ಕರ್ನಾಟಕ

karnataka

ETV Bharat / state

ಕಾಡೊಳಗೂ ಪ್ರವಾಹ.. ಬಂಡೀಪುರದ ಮೂಳೆಹೊಳೆಯಲ್ಲಿ ನೀರೋನೀರು.. - ಕರ್ನಾಟಕದ ಕೇರಳ ಗಡಿಯಾದ ಮೂಲೆಹೊಳೆ ಚೆಕ್​ಪೋಸ್ಟ್​

ಇಂದು ನಮ್ಮ ಜೋರುಮಳೆಯೇನೂ ಬಂದಿಲ್ಲ. ಆದರೆ, ಮುತ್ತಂಗದಲ್ಲಿ ಸುರಿಯುತ್ತಿರುವ ನೀರು ನಮ್ಮ ಭಾಗಕ್ಕೂ ಹರಿದು ಬರುತ್ತಿದೆ.‌ ಅರಣ್ಯ ಇಲಾಖೆ ಸಿಬ್ಬಂದಿಯೂ ಕೂಡ ಕಾಡೊಳಗೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ..

Bandipur forest
ಬಂಡೀಪುರದ ಮೂಳೆಹೊಳೆ

By

Published : Aug 8, 2020, 5:26 PM IST

ಚಾಮರಾಜನಗರ :ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ಹಸಿರು ಕಾಡಲೆಲ್ಲ ಬರೀ ನೀರು ತುಂಬಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದ ಕೇರಳ ಗಡಿಯಾದ ಮೂಲೆಹೊಳೆ ಚೆಕ್​ಪೋಸ್ಟ್‌ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ನೀರಿನ ಹರಿವು ಕಡಿಮೆಯಾಗುವವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಮೂಳೆಹೊಳೆ ಆರ್​ಎಫ್ಒ ಮಹಾದೇವಯ್ಯ ಈಟಿವಿ ಭಾರತದೊಂದಿಗೆ ಮಾತನಾಡಿ, ಇಂದು ನಮ್ಮ ಜೋರುಮಳೆಯೇನೂ ಬಂದಿಲ್ಲ. ಆದರೆ, ಮುತ್ತಂಗದಲ್ಲಿ ಸುರಿಯುತ್ತಿರುವ ನೀರು ನಮ್ಮ ಭಾಗಕ್ಕೂ ಹರಿದು ಬರುತ್ತಿದೆ.‌ ಅರಣ್ಯ ಇಲಾಖೆ ಸಿಬ್ಬಂದಿಯೂ ಕೂಡ ಕಾಡೊಳಗೆ ತೆರಳಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಕೇರಳದ ಗಡಿಗ್ರಾಮವಾದ ಪುನ್‌ಕುಳಿ ಗ್ರಾಮದಲ್ಲೂ 3-4 ಅಡಿ ನೀರು ನಿಂತಿದೆ. ಅಲ್ಲಿನ ದೇಗುಲ, ಕೆಲ ಟೀ ಅಂಗಡಿಗಳು ಜಲಾವೃತವಾಗಿವೆ ಎಂದು ಮೂಲಗಳು ಖಚಿತಪಡಿಸಿವೆ.

ABOUT THE AUTHOR

...view details