ಚಾಮರಾಜನಗರ: ಸುವರ್ಣಾವತಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಯಳಂದೂರು ಪಟ್ಟಣ ಹಾಗೂ ತಾಲೂಕಿನ ಹಲವು ಪ್ರದೇಶಗಳು ಜಲಾವೃತವಾಗಿದೆ. ಇಲ್ಲಿನ ರಾಜಕಾಲುವೆ, ಕಚೇರಿಗಳು, ರಸ್ತೆಗಳು ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ. ಭಾರಿ ಮಳೆಗೆ ಅಗರದಿಂದ ಉತ್ತಂಬಳ್ಳಿ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭಾರಿ ಮಳೆಗೆ ಯಳಂದೂರಿನಲ್ಲಿರುವ ವಲಯ ಅರಣ್ಯ ಇಲಾಖೆ, ಚೆಸ್ಕಾಂ ಇಲಾಖೆ, ಪದವಿ ಪೂರ್ವ ಕಾಲೇಜು, ಮಾರಮ್ಮನ ದೇವಾಲಯ, ಪೊಲೀಸ್ ವಸತಿ ಗೃಹ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸಿ ಮಂದಿರ ಹಾಗೂ ಇಲ್ಲಿನ ವಸತಿಗೃಹ ಸಂಪೂರ್ಣ ಜಲಾವೃತವಾಗಿದೆ.