ಚಾಮರಾಜನಗರ:ಸತತ ಮಳೆಯಿಂದ ನಾಡಿನಲ್ಲಷ್ಟೇ ಅಲ್ಲದೇ ಕಾಡಿನಲ್ಲೂ ವರುಣನ ಆರ್ಭಟ ಜೋರಾಗಿದ್ದು, ಹಸಿರ ನಡುವೆ ಜಲ ಓಟ ನೋಡಸಿಗುತ್ತದೆ.
ಮೂಲೆಹೊಳೆ ಅರಣ್ಯ ವಲಯದಲ್ಲಿ ಮಳೆ ಅಬ್ಬರ: ಹಸಿರ ನಡುವೆ ಜಲ ಓಟ! ಹೌದು, ವಯನಾಡಿನಲ್ಲಿ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಅರಣ್ಯ ವಲಯದಲ್ಲಿ ನದಿಯಂತೆ ನೀರು ಹರಿದರೇ ರಾಜ್ಯಕ್ಕೆ ಹೊಂದಿಕೊಂಡಂತಿರುವ ಮಧುಮಲೆ ಅರಣ್ಯವಲಯದಲ್ಲಿನ ಮಳೆನೀರಿನ ವೇಗ ರೇಸಿಗೆ ಬಿದ್ದಂತೆ ಇತ್ತು.
ಇನ್ನೂ ಬಂಡೀಪುರ ವಲಯ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯದಲ್ಲೂ ಉತ್ತಮವಾಗಿ ಮಳೆಯಾಗಿದ್ದು, ಹಸಿರ ಮಧ್ಯೆದಲ್ಲಿನ ಜಲರಾಶಿ ವೇಗಕ್ಕೆ ಎಣೆಯೇ ಇಲ್ಲದಂತಾಗಿದೆ.
ಈಗ ಸುರಿಯುತ್ತಿರುವ ಮಳೆಯಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ 150ಕ್ಕೂ ಹೆಚ್ಚು ಕೆರೆ-ಕಟ್ಟೆಗಳು ತುಂಬುವ ನಿರೀಕ್ಷೆ ಇದ್ದು, ಗೋಪಾಲಸ್ವಾಮಿ ಬೆಟ್ಟದಲ್ಲಿ ಜೋರು ಮಳೆಯಾಗುತ್ತಿರುವುದರಿಂದು ಹಿರಿಕೆರೆಗೆ ನೀರು ಬರುತ್ತಿರುವುದು ಹಲವರ ಸಂತಸಕ್ಕೆ ಕಾರಣವಾಗಿದೆ.