ಗುಂಡ್ಲುಪೇಟೆ:ತಾಲೂಕಿನ ತೆರಕಣಾಂಬಿ ಹೋಬಳಿಯ ಲಕ್ಕೂರು ಗ್ರಾಮದ ಸುತ್ತಮುತ್ತ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಬಾಳೆ ಫಸಲು ಹಾನಿಗೊಂಡಿದೆ.
ಲಕ್ಕೂರು ಗ್ರಾಮದ ಮಹೇಶ ಎಂಬುವರು ತಮ್ಮ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಫಸಲು ಬಿರುಗಾಳಿ ಮಳೆ ಹೊಡೆತದಿಂದ ನೆಲಕ್ಕೆ ಉರುಳಿ ಹಾನಿಗೊಂಡಿದೆ. ಸುಮಾರು 200ಕ್ಕೂ ಹೆಚ್ಚು ಬಾಳೆ ಗಿಡಗಳು ಮುರಿದು ಬಿದ್ದಿವೆ. ಗುರುಮಲ್ಲಪ್ಪ ಎಂಬುವರಿಗೆ ಸೇರಿದ್ದ 100ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕೆ ಉರುಳಿವೆ.
ಗುಂಡ್ಲುಪೇಟೆ: ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ನೆಲಕಚ್ಚಿದ ಬಾಳೆ ಬೆಳೆ - Gundlupete chamarajnagara latest news
ಲಕ್ಕೂರು ಗ್ರಾಮದ ಸುತ್ತಮುತ್ತ ಬುಧವಾರ ಸಂಜೆ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಬಾಳೆ ಫಸಲು ಹಾನಿಗೊಂಡಿದೆ.
Heavy rain in gundlupete
ಬಾಳೆ ಫಸಲು ಹಾನಿಯಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಸಂಬಂಧಪಟ್ಟವರು ಸ್ಥಳ ಪರಿಶೀಲಿಸಿ ಕ್ರಮ ವಹಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.