ಚಾಮರಾಜನಗರ: ಸೋಮವಾರ ರಾತ್ರಿ ಹಾಗೂ ಇಂದು ಮುಂಜಾನೆ ಜಿಲ್ಲಾ ಕೇಂದ್ರ, ಚಾಮರಾಜನಗರ ತಾಲೂಕು, ಗುಂಡ್ಲುಪೇಟೆ, ಹನೂರು ಭಾಗದಲ್ಲಿ ಉತ್ತಮ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಾಮರಾಜನಗರದ ಹಲವೆಡೆ ಭಾರೀ ಮಳೆ: ತುಂಬುತ್ತಿವೆ ಕೆರೆ-ಕಟ್ಟೆ - ಚಾಮರಾಜನಗರ ಮಳೆ ಸುದ್ದಿ
ಚಾಮರಾಜನಗರ ತಾಲೂಕು, ಗುಂಡ್ಲುಪೇಟೆ, ಹನೂರು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
![ಚಾಮರಾಜನಗರದ ಹಲವೆಡೆ ಭಾರೀ ಮಳೆ: ತುಂಬುತ್ತಿವೆ ಕೆರೆ-ಕಟ್ಟೆ Heavy rain in Chamarajnagar](https://etvbharatimages.akamaized.net/etvbharat/prod-images/768-512-8635039-1064-8635039-1598937736500.jpg)
ಚಾಮರಾಜನಗರದ ಹಲವೆಡೆ ಭಾರೀ ಮಳೆ: ತುಂಬುತ್ತಿವೆ ಕೆರೆ-ಕಟ್ಟೆ
ಚಾಮರಾಜನಗರದ ಹಲವೆಡೆ ಭಾರೀ ಮಳೆ..
ಜಿಲ್ಲೆಯ ಬಹುತೇಕ ಕೆರೆ ಕಟ್ಟೆಗಳು ತುಂಬುತ್ತಿವೆ. ಮತ್ತೊಂದೆಡೆ ನೀರಿಲ್ಲದೆ ಒಣಗುತ್ತಿದ್ದ ರಾಗಿ, ಜೋಳ, ಕಡಲೆಕಾಯಿ ಪೈರುಗಳು ಸುರಿದ ಮಳೆಗೆ ಜೀವಕಳೆ ತುಂಬಿಕೊಂಡಿವೆ. ಮಳೆಯಾಶ್ರಿತ ರೈತರಿಗಂತೂ ಉತ್ತಮ ಬೆಳೆಯ ನಿರೀಕ್ಷೆ ಗರಿಗೆದರಿದೆ.
ಜಿಲ್ಲೆಯ ಇತರೆ ಭಾಗಕ್ಕೆ ಹೋಲಿಸಿದರೆ ಹನೂರು ಭಾಗದಲ್ಲಿ ಜೋರು ಮಳೆಯಾಗಿದ್ದು, ಕೌದಳ್ಳಿ, ಶಾಗ್ಯ, ಎಲ್ಲೆಮಾಳದ ಕಟ್ಟೆಗಳು ಭೋರ್ಗರೆದಿವೆ. ಹನೂರಿನ ಸ್ವಾಮಿಹಳ್ಳ ತುಂಬಿ ಹರಿದಿದ್ದರಿಂದ ಕುರುಬರ ಸ್ಮಶಾನ, ಜಮೀನುಗಳಿಗೆ ತೆರಳಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.