ಚಾಮರಾಜನಗರ: ಜಿಲ್ಲಾದ್ಯಂತ ಶುಕ್ರವಾರ ಮುಂಜಾನೆಯಿಂದ ಆರಂಭವಾದ ಜಿಟಿಜಿಟಿ ಮಳೆ ಶನಿವಾರವೂ ಮುಂದುವರೆದಿದ್ದು ಗಡಿಜಿಲ್ಲೆ ಜನರು ಹೈರಣಾಗಿದ್ದಾರೆ. ಮೂರ್ನಾಲ್ಕು ದಿನಗಳಿಂದ ಇದ್ದ ಚಳಿಯ ವಾತಾವರಣ ಕಳೆದ ಎರಡು ದಿನಗಳಿಂದ ಹೆಚ್ಚಾಗಿದ್ದು, ಎರಡು ದಿನಗಳಿಂದ ಬಿಸಿಲಿನ ಕಿರಣವೇ ಮಾಯವಾಗಿದೆ. ಅರಣ್ಯ ಪ್ರದೇಶದಲ್ಲಿ ದಿನವಿಡೀ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮೀಣ ರಸ್ತೆಗಳು ಕೆಸರುಮಯ ಆಗಿದ್ದು, ವಾಹನಗಳಲ್ಲಿ ಸಂಚರಿಸಲು ಜನರು ಪ್ರಯಾಸಪಟ್ಟರು. ಜೊತೆಗೆ ಕೃಷಿ ಚಟುವಟಿಕೆಗೂ ಪೆಟ್ಟು ಬಿದ್ದಿದೆ. ಶಾಲಾ - ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಮಳೆ ನಡುವೆ ಪರದಾಡಿದರು.
ಮಳೆ ನಡುವೆ ಪಾಠ: ಕಳೆದ 2 ದಿನಗಳಿಂದ ಜಿಟಿಜಿಟಿ ಮಳೆ ಬೀಳುತ್ತಿರುವ ಹಿನ್ನೆಲೆ ಹನೂರು ತಾಲೂಕಿನ ಪಳನಿಮೇಡು ಶಾಲೆಯ ಮೇಲ್ಛಾವಣಿ ದುರಸ್ತಿ ಆಗದಿರುವುದರಿಂದ ಸುರಿಯುವ ಮಳೆ ನಡುವೆ ಮಕ್ಕಳಿಗೆ ಪಾಠ - ಪ್ರವಚನ ನಡೆಸಿರುವ ಆರೋಪ ಕೇಳಿಬಂದಿದೆ.