ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಭರ್ಜರಿ ವರ್ಷಧಾರೆ: ಪ್ರವಾಸಿಗರ ಪರದಾಟ, ವಾಹನ ಸಂಚಾರ ಅಸ್ತವ್ಯಸ್ತ

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸುರಿದ ಮಳೆಗೆ ಹಳ್ಳಕೊಳ್ಳ ತುಂಬಿ ಹರಿದ ಹಿನ್ನೆಲೆಯಲ್ಲಿ ಪ್ರವಾಸಿಗರು ಕಾಡಿನ ಮಧ್ಯ ನೀರು ಹರಿವು ಕಡಿಮೆಯಾಗುವ ತನಕ ಕಾಯಬೇಕಾಯಿತು.

heavy-rain-in-chamarajanagar
ಚಾಮರಾಜನಗರದಲ್ಲಿ ಭರ್ಜರಿ ವರ್ಷಧಾರೆ

By

Published : Oct 17, 2021, 3:43 AM IST

ಚಾಮರಾಜನಗರ: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಶನಿವಾರ ಮಧ್ಯಾಹ್ನದಿಂದ ಭರ್ಜರಿ ಮಳೆಯಾಗುತ್ತಿದ್ದು ವೀಕೆಂಡ್ ಮೋಜಿಗೆ ಬಂದಿದ್ದ ಪ್ರವಾಸಿಗರು ಪರದಾಡುವಂತಾಗಿತ್ತು.

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಸುರಿದ ಮಳೆಗೆ ಹಳ್ಳಕೊಳ್ಳ ತುಂಬಿ ಹರಿದ ಹಿನ್ನೆಲೆಯಲ್ಲಿ ಪ್ರವಾಸಿಗರು ಕಾಡಿನ ಮಧ್ಯ ನೀರು ಹರಿವು ಕಡಿಮೆಯಾಗುವ ತನಕ ಕಾಯಬೇಕಾಯಿತು. ಇದರೊಟ್ಟಿಗೆ, ಲಾಂಗ್ ರೈಡಿಗೆಂದು ಬಿಳಿಗಿರಿರಂಗನ ಬೆಟ್ಟ, ಬಂಡೀಪುರ, ಭರಚುಕ್ಕಿಗೆ ಬಂದಿದ್ದವರು ಮಳೆಯಿಂದ ತೊಂದರೆಗೊಳಗಾದ ಘಟನೆ ನಡೆಯಿತು.

ಜಿಲ್ಲಾ ಕೇಂದ್ರದಲ್ಲೂ ಬರೋಬ್ಬರಿ ಎರಡೂವರೆ ತಾಸು ಜೋರು ಮಳೆಯಾದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಜೋಡಿ ರಸ್ತೆ, ಸತ್ತಿ ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಪಡಿಪಾಟಲು ಪಟ್ಟರು.

ಇದನ್ನೂ ಓದಿ:T20 World Cup: ಇಂದಿನಿಂದ ಚುಟುಕು ಕ್ರಿಕೆಟ್​ ಟೂರ್ನಿ ಆರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ

ABOUT THE AUTHOR

...view details