ಚಾಮರಾಜನಗರ: ಒಂದು ವಾರದ ಬಳಿಕ ಇಂದು ಸಂಜೆ ಚಾಮರಾಜನಗರದಲ್ಲಿ ಭರ್ಜರಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಚಾಮರಾಜನಗರದಲ್ಲಿ ಭರ್ಜರಿ ಮಳೆ: ವಾಹನ ಸವಾರರ ಪರದಾಟ - ಚಾಮರಾಜನಗರ ಸುದ್ದಿ
ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಸಂಜೆ ಸುರಿದ ಮಳೆಗೆ ಕೆಲ ಮಳಿಗೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ಮಳೆ
ಮಳೆಯಿಂದಾಗಿ ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತ, ದೊಡ್ಡಂಗಡಿ ಬೀದಿಯಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಚಾಲನೆ ಮಾಡಲು ಸವಾರರು ಪರದಾಡುವಂತಾಯಿತು. ಕೆಲ ಮಳಿಗೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ಮಳೆಯಿಂದಾಗಿ ಟೊಮ್ಯಾಟೊ ಹಾಗೂ ಬಾಳೆ ಬೆಳೆಗಾರರು ಕಣ್ಣೀರು ಹಾಕುವಂತಾದ ಘಟನೆಯೂ ನಡೆದಿದೆ. ಬಹುಪಾಲು ಕಡೆ ಟೊಮ್ಯಾಟೊ ಹೂ ಬಿಡುವ ಸ್ಥಿತಿಯಲ್ಲಿದ್ದರಿಂದ ಬಿದ್ದ ಮಳೆಗೆ ಬೆಳೆ ಹಾನಿಯಾಗಿದೆ. ಇನ್ನು, ರಭಸವಾದ ಗಾಳಿಗೆ ಜಿಲ್ಲೆಯ ಹಲವಾರು ಕಡೆ ಬಾಳೆ ನೆಲಕಚ್ಚಿದೆ.