ಕೊಳ್ಳೇಗಾಲ (ಚಾಮರಾಜ ನಗರ): ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಬಿಳಿಗಿರಿ ರಂಗನ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಇಂದು ವರುಣದೇವ ಸ್ವಾಗತ ನೀಡಿದ್ದಾನೆ. ಇಂದು ನಿರಂತರ 2 ಗಂಟೆಗಳ ಮಳೆ ಸುರಿದು ವಾತಾವರಣ ತಂಪಾಗಿದ್ದು, ಆಹ್ಲಾದಕರ ವಾತಾವರಣ ಮೂಡಿದೆ.
ಬಿಳಿಗಿರಿ ರಂಗನ ಬೆಟ್ಟದಲ್ಲಿ ವರುಣನ ಸಿಂಚನ.. ಪ್ರವಾಸಿಗರು ಫುಲ್ ಖುಷ್ - chamrajanagar news
ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದಲ್ಲಿ 2 ಗಂಟೆಗೂ ಅಧಿಕ ಕಾಲ ನಿರಂತರ ಮಳೆ ಸುರಿದಿದೆ.
ಬಿಳಿಗಿರಿ ರಂಗನ ಬೆಟ್ಟದಲ್ಲಿ ವರುಣನ ಸಿಂಚನ...ಪ್ರವಾಸಿಗರು ಫುಲ್ ಖುಷ್
ಕೊರೊನಾ ವೈರಸ್ ಹಿನ್ನೆಲೆ, ಮೂರು ತಿಂಗಳಿನಿಂದಲೂ ಬೆಟ್ಟಕ್ಕೆ ಭಾನುವಾರದ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಇದೀಗ ಸಂಡೇ ಲಾಕ್ಡೌನ್ ಸಂಪೂರ್ಣ ತೆರವಾಗಿದ್ದು, ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿದೆ.
ಬೆಟ್ಟದ ಸುತ್ತಲೂ ಆವರಿಸಿದ ಮಂಜಿನಿಂದ ಪ್ರವಾಸಿಗರು ಮೈಮರೆತರು. ಅಲ್ಲದೆ, ಬೆಟ್ಟದ ತಪ್ಪಲಿನಲ್ಲಿ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡರು.