ಕರ್ನಾಟಕ

karnataka

ETV Bharat / state

ಮಲೆಮಹದೇಶ್ವರ ಬೆಟ್ಟದಲ್ಲಿ ರಸ್ತೆಗೆ ಉರುಳಿದ ಬಂಡೆ: ಸಂಚಾರಕ್ಕೆ ತೊಂದರೆ - ಚಾಮರಾಜನಗರ ಭೂಕುಸಿತ

ತಡರಾತ್ರಿ ಸುರಿದ ಭಾರಿ ಮಳೆಗೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭೂಕುಸಿತ (Landslide) ಉಂಟಾಗಿ ಎರಡು ಬಂಡೆಗಳು ರಸ್ತೆಗೆ ಉರುಳಿ ಬಿದ್ದಿವೆ.

Male Mahadeshwara Hills
ರಸ್ತೆಗೆ ಉರುಳಿದ ಬಂಡೆ

By

Published : Nov 14, 2021, 1:16 PM IST

ಚಾಮರಾಜನಗರ: ಮೈಸೂರಿನ ಚಾಮುಂಡಿ ಬೆಟ್ಟದಂತೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಹ (Male Mahadeshwara Hills) ಮಹಾಮಳೆಗೆ ಭೂಕುಸಿತ ಉಂಟಾಗುತ್ತಿದ್ದು, ಬಂಡೆಗಲ್ಲುಗಳು ರಸ್ತೆಗೆ ಉರುಳಿ ಬಿದ್ದಿವೆ.

ಮಲೆಮಹದೇಶ್ವರ ಬೆಟ್ಟದ ವಡ್ಗಲ್ ರಂಗನಾಥಸ್ವಾಮಿ ದೇವಾಲಯದ ಸಮೀಪದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭೂಕುಸಿತ ಉಂಟಾಗಿ ಎರಡು ಬಂಡೆಗಳು ರಸ್ತೆಗೆ ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಲೆಮಹದೇಶ್ವರ ಬೆಟ್ಟದಲ್ಲಿ ರಸ್ತೆಗೆ ಉರುಳಿದ ಬಂಡೆ

ಇನ್ನು ರಸ್ತೆಯ ಒಂದು ಬದಿ ಬಂಡೆ ಇರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಒಂದೆರೆಡು ವಾರಗಳ ಹಿಂದಷ್ಟೇ ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಪಾಲಾರ್ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ, ಭತ್ತ ಕಟಾವು ಯಂತ್ರ ಪಲ್ಟಿ ಹೊಡೆದಿತ್ತು.

ರಸ್ತೆಗೆ ಉರುಳಿದ ಬಂಡೆ

ABOUT THE AUTHOR

...view details