ಕರ್ನಾಟಕ

karnataka

ETV Bharat / state

ಯಳಂದೂರು ಆಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ: ಸ್ತ್ರೀ ರೋಗ ತಜ್ಞೆ ಅಮಾನತು - ಸ್ತ್ರೀ ರೋಗ ತಜ್ಞೆ ಅಮಾನತು ಮಾಡಿದ ಶ್ರೀ ರಾಮುಲು

ಯಳಂದೂರು ಆಸ್ಪತ್ರೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ದಿಢೀರ್​ ಭೇಟಿ ನೀಡಿದ್ದು, ವೈದ್ಯರ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಯಳಂದೂರು ಆಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ

By

Published : Sep 24, 2019, 9:37 PM IST

ಚಾಮರಾಜನಗರ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಎರಡು ದಿನ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಯಳಂದೂರಿನ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರೋಗಿಗಳಿಂದ ಹಣ ವಸೂಲಿ, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಶಶಿರೇಖಾ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರಿಂದ ಡಾ. ಶಶಿರೇಖಾರನ್ನು ಅಮಾನುತು ಮಾಡಿ ಎಂದು ಅಧಿಕಾರಿಗಳಿಗೆ ಸಚಿವ ಶ್ರೀ ರಾಮುಲು ಸೂಚಿಸಿದರು.

ಯಳಂದೂರು ಆಸ್ಪತ್ರೆಗೆ ಆರೋಗ್ಯ ಸಚಿವರ ದಿಢೀರ್ ಭೇಟಿ

ಇದೇ ವೇಳೆ, ಆಸ್ಪತ್ರೆಯ ಸ್ವಚ್ಛತೆ ಕಾಪಾಡಲು ಟೆಂಡರ್ ತೆಗೆದುಕೊಂಡಿರುವ ಗುತ್ತಿಗೆದಾರನ ವಿರುದ್ಧ ಗರಂ ಆದ ಸಚಿವರು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಇಲ್ಲದಿದ್ದಲ್ಲಿ ಗುತ್ತಿಗೆಯನ್ನು ಬೇರೊಬ್ಬರಿಗೆ ಕೊಡುವುದಾಗಿ ಎಚ್ಚರಿಸಿದರು. ಇದೇ ವೇಳೆ, ಯಳಂದೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸ್ಥಳೀಯ ಶಾಸಕರು ಮನವಿ ಮಾಡಿದ್ದು ಈ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು‌.

ABOUT THE AUTHOR

...view details