ಕರ್ನಾಟಕ

karnataka

ETV Bharat / state

ಚಾಮರಾಜನಗರ: ಬಸ್‌ಗಳಲ್ಲಿ ಜನ ಕರೆ ತಂದು ಹೆಲ್ತ್‌ ಚೆಕಪ್‌ ಮಾಡಿಸಿದ ಟಿಕೆಟ್ ಆಕಾಂಕ್ಷಿ!

ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಧ್ವನಿ ವೆಂಕಟೇಶ್ ಅವರು ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪ ಸಮೀಪ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿದ್ದು, ಹಳ್ಳಿ-ಹಳ್ಳಿಗಳಿಂದ ಸಾವಿರಾರು ಜನರನ್ನು ಬಸ್​ಗಳಲ್ಲಿ ಕರೆತಂದು ತಪಾಸಣೆ ನಡೆಸಲಾಗುತ್ತಿದೆ‌.

health checkup camp
ಬೃಹತ್ ಆರೋಗ್ಯ ತಪಾಸಣಾ ಶಿಬಿರ

By

Published : Sep 18, 2022, 12:57 PM IST

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜನಧ್ವನಿ ವೆಂಕಟೇಶ್ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಬಿಜೆಪಿ ನಾಯಕರು ಮತ್ತು ಜನರ ಮನ ಗೆಲ್ಲಲು ಪ್ರಯತ್ನಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ ಅಂಗವಾಗಿ ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪ ಸಮೀಪ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿದ್ದು, ಹಳ್ಳಿ-ಹಳ್ಳಿಗಳಿಂದ ಸಾವಿರಾರು ಜನರನ್ನು ಬಸ್​ಗಳಲ್ಲಿ ಕರೆತಂದು ತಪಾಸಣೆ ನಡೆಸಲಾಗುತ್ತಿದೆ‌.

ಗೌರಿಶಂಕರ ಕಲ್ಯಾಣ ಮಂಟಪ ಸಮೀಪ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ಇದನ್ನೂ ಓದಿ:ವಿಧಾನ ಪರಿಷತ್ ಚುನಾವಣೆಗೆ ನಾನೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ: ಹೆಬ್ಬಾಳ್ಕರ್ ಸಹೋದರ ಚನ್ನರಾಜ್

ಕಣ್ಣಿನ ತಪಾಸಣೆ, ಕ್ಯಾನ್ಸರ್, ಬಿಪಿ, ಶುಗರ್, ಕಿಡ್ನಿ , ಹೋಮಿಯೋಪತಿ, ಆಯುರ್ವೇದ, ಮಕ್ಕಳ ವಿಭಾಗ ಸೇರಿದಂತೆ ಸಂಪೂರ್ಣ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. 6 ರಿಂದ 7 ಸಾವಿರಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದು, 250 ವೈದ್ಯರಿದ್ದಾರೆ.

ಇದನ್ನೂ ಓದಿ:ಗ್ರಾಮೀಣ ಜನರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹನೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಸರತಿ ಸಾಲೇ ಇದ್ದು, ಪ್ರೀತಂ ನಾಗಪ್ಪ, ದತ್ತೇಶ್ ಕುಮಾರ್, ನಿಶಾಂತ್ ಹೀಗೆ ಪಟ್ಟಿ ಬೆಳೆಯುತ್ತಿದೆ. ಇವರೆಲ್ಲರಿಗೂ ಠಕ್ಕರ್ ಕೊಡಲು ವೆಂಕಟೇಶ್ ಈ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ನಾನು ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ: ಕೆಜಿಎಫ್ ಬಾಬು

ABOUT THE AUTHOR

...view details