ಕರ್ನಾಟಕ

karnataka

ETV Bharat / state

ವಿಡಿಯೋ : ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಉಚಿತ ಪರೀಕ್ಷೆಗೆ ಹಣ ಪೀಕುವ ಸಿಬ್ಬಂದಿ? - ಕೊರೊನಾ ಉಚಿತ ಪರೀಕ್ಷೆಗೆ ಹಣ ಸ್ವೀಕಾರ ಆರೋಪ

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಲಂಚಾವತಾರಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಡಿಹೆಚ್ಒ ವಿಶ್ವೇಶ್ವರಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಸಿಗಲಿಲ್ಲ..

health-center-lab-staff-who-received-money-from-patient-relatives-in-chamarajanagara
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಉಚಿತ ಪರೀಕ್ಷೆಗೆ ಹಣ ಪಡೆದಿದ್ದಾರೆ ಎನ್ನಲಾದ ವಿಡಿಯೋ ಸೆರೆ

By

Published : Oct 12, 2021, 5:18 PM IST

ಚಾಮರಾಜನಗರ :ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ಸೇರಿ ರಕ್ತ, ಮೂತ್ರ ಪರೀಕ್ಷೆಗೆ ಹೆಚ್ಚಿನ‌ ಹಣ ಪೀಕುತ್ತಿರುವ ಆರೋಪ ಸಂತೇಮರಹಳ್ಳಿ ಆರೋಗ್ಯ ಕೇಂದ್ರದ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ರೋಗಿಯ ಸಂಬಂಧಿಯೊಬ್ಬರು ಸೆರೆ ಹಿಡಿದಿದ್ದಾರೆ ಎನ್ನಲಾದ ವಿಡಿಯೋ ವೈರಲ್​ ಆಗಿದೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಉಚಿತ ಪರೀಕ್ಷೆಗೆ ಹಣ ಪಡೆದಿದ್ದಾರೆ ಎನ್ನಲಾದ ವಿಡಿಯೋ..

ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿ ಒಬ್ಬರು ರೋಗಿ ಸಂಬಂಧಿಯಿಂದ ಹಣ ಪಡೆದು ಜೇಬಿಗಿಳಿಸಿದ್ದಾರೆ ಎನ್ನಲಾದ ದೃಶ್ಯ ಸೆರೆಯಾಗಿದೆ. ರಶೀದಿ ಕೇಳಿದ ವೇಳೆ 230 ರೂ. ವೆಚ್ಚ ತಗುಲುತ್ತದೆ ಎಂದಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.

ಇಷ್ಟೇ ಅಲ್ಲ, ರಕ್ತ ಮತ್ತು ಮೂತ್ರ ಪರೀಕ್ಷೆಗಳಿಗೆ ಹೆಚ್ಚಿನ ಹಣವನ್ನು ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ. ಅಲ್ಲಿನ ವೈದ್ಯರಿಗೆ ತಿಳಿದು ಇದು ನಡೆಯುತ್ತಿದೆಯೇ? ಇಲ್ಲವೇ? ಎಂಬುದನ್ನು ಡಿಹೆಚ್ಒ ಪರಿಶೀಲಿಸಬೇಕಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ಕೊರೊನಾ ಕಾಲಘಟ್ಟದಲ್ಲಿ ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈಗ ಆ ಅಪವಾದಕ್ಕೆ ಸರ್ಕಾರಿ ಆಸ್ಪತ್ರೆಗಳು ಸೇರಿಕೊಳ್ಳುತ್ತಿರುವುದು ವಿಪರ್ಯಾಸ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಲಂಚಾವತಾರಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಡಿಹೆಚ್ಒ ವಿಶ್ವೇಶ್ವರಯ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಸಿಗಲಿಲ್ಲ.

ಓದಿ:ದಾವಣಗೆರೆಯಲ್ಲಿ ಧಾರಾಕಾರ ಮಳೆ : ದ್ವೀಪದಂತಾದ ಅಡಿಕೆ, ಎಲೆ ಬಳ್ಳಿ ತೋಟಗಳು.. ಈ ಕುರಿತ ವಾಕ್‌ಥ್ರೂ..

ABOUT THE AUTHOR

...view details