ಚಾಮರಾಜನಗರ:ಕೊರೊನಾ ಮಹಾಮಾರಿಗೆ ಜಿಲ್ಲೆಯಲ್ಲಿ ಮುಖ್ಯಶಿಕ್ಷಕರೊಬ್ಬರು ಇಂದು ಬಲಿಯಾಗಿರುವ ಘಟನೆ ನಡೆದಿದೆ.
ಕೊರೊನಾ ವೈರಸ್ ಸೋಂಕಿಗೆ ಚಾಮರಾಜನಗರದಲ್ಲಿ ಮುಖ್ಯ ಶಿಕ್ಷಕ ಬಲಿ - Death of corona infected of Chamarajanagar
ಕೊಳ್ಳೇಗಾಲದ ಗುರುಮಲ್ಲೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಉಮಾಪತಿ ಎಂಬವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ಕೊರೊನಾ ಮಹಾಮಾರಿಗೆ ಚಾಮರಾಜನಗರದಲ್ಲಿ ಮುಖ್ಯಶಿಕ್ಷಕ ಬಲಿ
ಕೊಳ್ಳೇಗಾಲದ ಗುರುಮಲ್ಲೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಉಮಾಪತಿ ಎಂಬವರು ಕೆಲದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅಸುನೀಗಿದ್ದಾರೆ.
ಈ ಹಿಂದೆ ಗುಂಡ್ಲುಪೇಟೆಯ ದೈಹಿಕ ಶಿಕ್ಷಕರೊಬ್ಬರು ಮಹಾಮಾರಿಗೆ ಬಲಿಯಾಗಿದ್ದರು. ಇಲ್ಲಿಯವರೆಗೆ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ಮಂದಿ ಶಿಕ್ಷಕರಿಗೆ ಕೊರೊನಾ ವಕ್ಕರಿಸಿದೆ.
TAGGED:
ಚಾಮರಾಜನಗರ ಕೊರೊನಾ ಸೋಂಕಿತ ಸಾವು