ಚಾಮರಾಜನಗರ: ಎಂಇಎಸ್ ಧ್ವಜ ಸುಟ್ಟ ಪುಂಡಾಟದ ಬಳಿಕ ಕೊಯಮತ್ತೂರಿನಲ್ಲಿ ಯುವಕರ ಗುಂಪೊಂದು ಕರ್ನಾಟಕ ಪ್ರವಾಸಿಗರ ಕಾರಿಗೆ ಕಟ್ಟಿದ್ದ ಕರ್ನಾಟಕದ ಬಾವುಟ ತೆಗೆಯಿರಿ ಎಂದು ಕಿರಿಕ್ ನಡೆಸಿದ್ದಾರೆ.
ಮುಂದುವರೆದ ಪ್ಲಾಗ್ ಫೈಟ್: ವಾಹನದಲ್ಲಿ ಕನ್ನಡ ಬಾವುಟ ಹಾಕಿದ್ದಕ್ಕೆ ತಮಿಳರ ಕಿರಿಕ್ - hassle for Kannada flag removal matter
ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ 9 ಮಂದಿ ಯುವಕರ ತಂಡ ಹೊಸ ವರ್ಷಾಚರಣೆ ಪ್ರಯುಕ್ತ ಸದ್ಗುರು ಅವರ ಈಶಾ ಪೌಂಡೇಷನ್ ಭೇಟಿ ನೀಡಲು ತೆರಳುತ್ತಿದ್ದಾಗ ಒಂದೂವರೆ ಕಿ.ಮೀ ಗಿಂತಲೂ ಹೆಚ್ಚಿನ ದೂರ ಬೈಕ್ನಲ್ಲಿ ಚೇಸ್ ಮಾಡಿಕೊಂಡು ಪುಂಡಾಟ ನಡೆಸಿದ್ದಾರೆ.
ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ 9 ಮಂದಿ ಯುವಕರ ತಂಡ ಹೊಸ ವರ್ಷಾಚರಣೆ ಪ್ರಯುಕ್ತ ಸದ್ಗುರು ಅವರ ಈಶಾ ಪೌಂಡೇಷನ್ಗೆ ಭೇಟಿ ನೀಡಲು ತೆರಳುತ್ತಿದ್ದಾಗ ಒಂದೂವರೆ ಕಿ.ಮೀ ಗಿಂತಲೂ ಹೆಚ್ಚಿನ ದೂರ ಬೈಕ್ನಲ್ಲಿ ಚೇಸ್ ಮಾಡಿಕೊಂಡು ಪುಂಡಾಟ ನಡೆಸಿದ್ದಾರೆ.
ಈ ಕುರಿತು ರಾಜ್ಯದಿಂದ ತೆರಳಿದ್ದ ಶಿವಕುಮಾರ್ ಎಂಬುವರು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾತನಾಡಿ, ತಮಿಳುನಾಡಿನ ಬಾವುಟವನ್ನು ನಾವು ನಿಮ್ಮ ರಾಜ್ಯಕ್ಕೆ ಹಾಕಿಕೊಂಡು ಬಂದರೆ ತಗಾದೆ ತೆಗೆಯುತ್ತೀರಿ, ಈಗ ನೀವು ಇಲ್ಲಿಗೆ ಬಂದಿದ್ದೀರಿ ಬಾವುಟ ತೆಗೆಯಿರಿ, ಇಲ್ಲದಿದ್ದರೆ, ನಿಮ್ಮ ರಾಜ್ಯಕ್ಕೆ ವಾಪಸ್ಸಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.