ಕರ್ನಾಟಕ

karnataka

ETV Bharat / state

ಚಾಮರಾಜನಗರದ ಲಾಡ್ಜ್​ನಲ್ಲಿ ಹಾಸನ ವ್ಯಕ್ತಿ ಆತ್ಮಹತ್ಯೆ: ಕಾರಣ ನಿಗೂಢ - Hassan man suicide in Chamarajanagar,

ಚಾಮರಾಜನಗರದ ಲಾಡ್ಜ್​ವೊಂದರಲ್ಲಿ ಹಾಸನ ಮೂಲದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು, ಆತನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

Hassan man suicide, Hassan man suicide in Chamarajanagar, Hassan man suicide news, ಹಾಸನ ವ್ಯಕ್ತಿ ಆತ್ಮಹತ್ಯೆ, ಚಾಮರಾಜನಗರದಲ್ಲಿ ಹಾಸನ ವ್ಯಕ್ತಿ ಆತ್ಮಹತ್ಯೆ, ಹಾಸನ ವ್ಯಕ್ತಿ ಆತ್ಮಹತ್ಯೆ ಸುದ್ದಿ,
ಚಾಮರಾಜನಗರದ ಲಾಡ್ಜ್​ನಲ್ಲಿ ಹಾಸನ ವ್ಯಕ್ತಿ ಆತ್ಮಹತ್ಯೆ

By

Published : Feb 10, 2020, 8:08 PM IST

ಚಾಮರಾಜನಗರ: ಲಾಡ್ಜ್​ವೊಂದರಲ್ಲಿ ಹಾಸನ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಚಾಮರಾಜನಗರದ ಲಾಡ್ಜ್​ನಲ್ಲಿ ಹಾಸನ ವ್ಯಕ್ತಿ ಆತ್ಮಹತ್ಯೆ

ಆತನ ಬಳಿಯಿದ್ದ ಆಧಾರ್ ಕಾರ್ಡ್ ಮೂಲಕ ಹಾಸನ ಜಿಲ್ಲೆಯ ಬರಾಳು ಬಳಿಯ ಜಾತೇನಹಳ್ಳಿ ಗ್ರಾಮದ ಸಂಜಯ್ (37) ನೇಣಿಗೆ ಶರಣಾದ ವ್ಯಕ್ತಿಯೆಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದ ಸಂಜಯ್ ಇಂದು ಬೆಳಗ್ಗೆ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣವಾಗಲಿ, ಡೆತ್ ನೋಟ್ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details