ಚಾಮರಾಜನಗರ:ಕೆಬ್ಬೆಕಟ್ಟೆ ಶನೀಶ್ವರ ದೇಗುಲದಲ್ಲಿ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣದ ಆರು ಆರೋಪಿಗಳಿಗೂ ಜಿಲ್ಲಾ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಷರತ್ತುಬದ್ಧ ಜಾಮೀನು ನೀಡಿದರು.
ದಲಿತ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ: ಆರೋಪಿಗಳಿಗೆ ಷರತ್ತುಬದ್ಧ ಜಾಮೀನು - undefined
ದಲಿತ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣದ ಆರು ಆರೋಪಿಗಳಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯ ಷರತ್ತುಬದ್ಧ ಜಾಮೀನು ವಿಧಿಸಿದೆ.
ಆರೋಪಿಗಳಿಗೆ ಷರತ್ತುಬದ್ಧ ಜಾಮೀನು
ಕಳೆದ ಜೂನ್ನಲ್ಲಿ ಕೆಬ್ಬೇಕಟ್ಟೆ ಶನೀಶ್ವರ ದೇಗುಲದಲ್ಲಿ ಪ್ರತಾಪ್ ಎಂಬ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದ ಆರೋಪ ಹೊತ್ತಿದ್ದ ಶನೇಶ್ವರ ದೇಗುಲದ ಅರ್ಚಕ ಶಿವಪ್ಪ, ಪುಟ್ಟಸ್ವಾಮಿ, ಬಸವರಾಜು, ಮಾಣಿಕ್ಯ, ಸತೀಶ್, ಚನ್ನಕೇಶವ ಮೂರ್ತಿ ಅವರಿಗೆ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ನೀಡಿ ಆದೇಶ ನೀಡಿದ್ದಾರೆ.
ಸಂತ್ರಸ್ತ ಪ್ರತಾಪ್ ಪರ ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ ಮತ್ತು ಖಾಸಗಿ ವಕೀಲ ಕಾಂತರಾಜು ವಾದಿಸಿದ್ದರು. ಆರೋಪಿಗಳ ಪರ ಶೃತಿ ಪ್ರತಿವಾದ ಮಂಡಿಸಿದ್ದರು.