ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಮೊದಲ ಬಾರಿಗೆ ಹನುಮ ಜಯಂತಿ ಶೋಭಾಯಾತ್ರೆ: ಸಹಸ್ರಾರು ಮಂದಿ ಭಾಗಿ

ಚಾಮರಾಜನಗರದಲ್ಲಿ ಹನುಮ ಜಯಂತಿ ಪ್ರಯುಕ್ತ ಬೃಹತ್‌ ಶೋಭಾಯಾತ್ರೆ ನಡೆದಿದ್ದು ಸಹಸ್ರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗಿಯಾದರು.

Hanuma Jayanti Shobhayatra in Chamarajanagar
ಚಾಮರಾಜನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ

By

Published : Dec 18, 2022, 8:50 PM IST

ಚಾಮರಾಜನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ

ಚಾಮರಾಜನಗರ: ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ಹನುಮ ಜಯಂತಿ ಪ್ರಯುಕ್ತ ಬೃಹತ್‌ ಶೋಭಾಯಾತ್ರೆ ನಡೆದಿದ್ದು, ಸಹಸ್ರಾರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗಿಯಾದರು.

ಚಾಮರಾಜನಗರದ ಶ್ರೀ ಅಭಯ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ ಬೃಹತ್ ಹನುಮನ ಉತ್ಸವ ಮೂರ್ತಿ ಮೆರವಣಿಗೆಗೆ ಎಸಿ ಗೀತಾ ಹುಡೇದಾ ಚಾಲನೆ ಕೊಟ್ಟರು‌. ನಂದಿಧ್ವಜ, ವೀರಗಾಸೆ, ಚಂಡೆವಾದ್ಯ, ಡೊಳ್ಳುಕುಣಿತ, ಗಾರುಡಿಗೊಂಬೆ ಸೇರಿ ವಿವಿಧ ಕಲಾತಂಡಗಳು ಶೋಭಾಯಾತ್ರೆಗೆ ರಂಗು ನೀಡಿತು.

ಛತ್ರಪತಿ ಶಿವಾಜಿ ಹಾಗೂ ಹನುಮನ ಧ್ವಜಗಳು, ಡಿಜೆ ಸಂಗೀತ ಶೋಭಾಯಾತ್ರೆಯಲ್ಲಿ ಗಮನ ಸೆಳೆಯಿತು‌. ತರಕಾರಿ ಮಾರುಕಟ್ಟೆ, ಚಿಕ್ಕಂಗಡಿ ಬೀದಿ, ದೊಡ್ಡಂಗಡಿ ಬೀದಿ, ರಥದಬೀದಿ ಮಾರ್ಗವಾಗಿ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಶೋಭಾಯಾತ್ರೆ ಸಂಪನ್ನಗೊಂಡಿತು.

ಇದನ್ನೂ ಓದಿ:ದತ್ತಪೀಠ ರಸ್ತೆಯಲ್ಲಿ ಮೊಳೆ ಚೆಲ್ಲಿದ್ದ ಪ್ರಕರಣ.. ಮತ್ತೊಬ್ಬ ಆರೋಪಿ ಕೋರ್ಟಿಗೆ ಶರಣು

ABOUT THE AUTHOR

...view details