ಕರ್ನಾಟಕ

karnataka

ETV Bharat / state

ಜೂಜಾಟದ ಸಾಲಕ್ಕೆ ಯುವಕ ಬಲಿ.. ಇಸ್ಪೀಟ್ ಜೂಜಿಗೆ ಬ್ರೇಕ್ ಹಾಕದ ಗುಂಡ್ಲುಪೇಟೆ ಪೊಲೀಸರು..

ಜೂಜಿಗಾಗಿ ಮಾಡಿದ್ದ ಸಾಲಗಾರರ ಕಾಟ ತಾಳಲಾರದೆ ಮೈಸೂರು-ಊಟಿ ಹೆದ್ದಾರಿ ಬಳಿಯ ಸೆಂಟ್ ಜಾನ್ ಕಾನ್ವೆಂಟ್ ಸಮೀಪದ ಮರಕ್ಕೆ ನೇಣು ಹಾಕಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೂಜಾಟದ ಸಾಲಕ್ಕೆ ಯುವಕ ಬಲಿ

By

Published : Nov 19, 2019, 11:19 PM IST

ಚಾಮರಾಜನಗರ:ಜೂಜಾಟದ ಸಾಲದ ಬಾಧೆಗೆ ಬೇಸತ್ತು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಪಟ್ಟಣದ ನಿವಾಸಿ ಮಹಮ್ಮದ್ ಇದ್ದೀಸ್(30) ಎಂಬಾತ ಮೃತ ದುರ್ದೈವಿ. ಜೂಜಿಗಾಗಿ ಮಾಡಿದ್ದ ಸಾಲಗಾರರ ಕಾಟ ತಾಳಲಾರದೆ ಮೈಸೂರು-ಊಟಿ ಹೆದ್ದಾರಿ ಬಳಿಯ ಸೆಂಟ್ ಜಾನ್ ಕಾನ್ವೆಂಟ್ ಸಮೀಪದ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಮೃತನಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದು ಮೃತ ಮಹಮ್ಮದ್ ಇದ್ದೀಸ್‍ರ ಸಹೋದರ ಮಹಮ್ಮದ್ ಇಲಿಯಾಸ್ ಸಾಲಗಾರರ ಕಾಟವೇ ಸಾವಿಗೆ ಕಾರಣ ಎಂದು ದೂರು ನೀಡಿದ್ದಾರೆ.

ದಂಧೆ ನಿಲ್ಸಿ ಸ್ವಾಮಿ...!:ಗುಂಡ್ಲುಪೇಟೆ ತಾಲೂಕಿನ ಶಿವಪುರ, ಬೊಮ್ಮಲಾಪುರ, ಬಂಡೀಪುರ ರಸ್ತೆ, ಕೇರಳ ರಸ್ತೆ, ತೆರಕಣಾಂಬಿ ರಸ್ತೆಯ ಹೊಲಗಳು, ತೋಟದ ಮನೆಗಳು, ಖಾಲಿ ಜಾಗಗಳಲ್ಲಿ ಎಗ್ಗಿಲ್ಲದೇ ಜೂಜಾಟ ನಡೆಯುತ್ತಿದ್ದರೂ ಗುಂಡ್ಲುಪೇಟೆ ಪೊಲೀಸರು ಜಾಣ ಮೌನವಹಿಸಿರುವ ಆರೋಪ ಕೇಳಿ ಬಂದಿದೆ.

ಜೂಜಾಟ ಎಲ್ಲೆಲ್ಲಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದ್ದು ಜಿಲ್ಲಾ ಪೊಲೀಸ್ ಅಧಿಕಾರಿ ಈ ಕುರಿತು ಕ್ರಮವಹಿಸಬೇಕಿದೆ.

ABOUT THE AUTHOR

...view details