ಕರ್ನಾಟಕ

karnataka

ETV Bharat / state

4 ದಿನಕ್ಕೆ 4 ಬಲಿ ಪಡೆದ ಮಹಾಮಾರಿ: ಗುಂಡ್ಲುಪೇಟೆ ವೃದ್ಧ ಕೊರೊನಾದಿಂದ ಸಾವು - Gundlupeta

ಗುಂಡ್ಲುಪೇಟೆಯ 64 ವರ್ಷದ ವೃದ್ಧರೊಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Gundlupete
ಗುಂಡ್ಲುಪೇಟೆ ವೃದ್ಧ ಕೊರೊನಾದಿಂದ ಸಾವು

By

Published : Jul 14, 2020, 11:02 AM IST

ಚಾಮರಾಜನಗರ: ಕೊರೊನಾ ಸೋಂಕಿತ ವೃದ್ಧರೊಬ್ಬರು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಗುಂಡ್ಲುಪೇಟೆಯ 64 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇವರು ಅಸ್ತಮಾ, ಹೃದ್ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರಂಭದಿಂದಲೂ ಐಸೋಲೇಷನ್ ವಾರ್ಡ್​​​ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ಶನಿವಾರ ಕಾಮಗೆರೆ ನಿವಾಸಿ, ಭಾನುವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊಳ್ಳೇಗಾಲದ ವ್ಯಕ್ತಿ, ಸೋಮವಾರ ಕೊಳ್ಳೇಗಾಲದ ಮತ್ತೊಬ್ಬರು, ಇಂದು ಗುಂಡ್ಲುಪೇಟೆಯ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ಚಾಮರಾಜನಗರ ಲೆಕ್ಕಕ್ಕೆ ಮೂವರು ಒಳಪಡಲಿದ್ದಾರೆ.

ಒಟ್ಟಿನಲ್ಲಿ ಹಸಿರು ವಲಯ ಎಂಬ ಗರಿ ಹೊಂದಿದ್ದ ಚಾಮರಾಜನಗರದಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಎರಡೂ ಹೆಚ್ಚಾಗುತ್ತಿದೆ.

ABOUT THE AUTHOR

...view details