ಚಾಮರಾಜನಗರ:ನ್ಯಾಯಾಲಯದ ಅನುಮತಿ ಮೇರೆಗೆ ಮುಖ್ಯ ರಸ್ತೆಯಲ್ಲಿದ್ದ ಆಂಜನೇಯ ದೇಗುಲವನ್ನು ತೆರವುಗೊಳಿಸಿದ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಮುಖ್ಯ ರಸ್ತೆಯಲ್ಲಿದ್ದ ಆಂಜನೇಯ ದೇಗುಲ ತೆರವು - ಆಂಜನೇಯನ ದೇಗುಲ ತೆರವು
ರಸ್ತೆ ಅಗಲೀಕರಣ ದೃಷ್ಟಿಯಿಂದ ಇಲ್ಲಿನ ಕೆ.ಎಸ್.ನಾಗರತ್ನಮ್ಮ ಶಾಲಾ ಮುಂಭಾಗವಿದ್ದ ಆಂಜನೇಯ ದೇಗುಲದ ತೆರವು ಕಾರ್ಯ ನಡೆಯಿತು.
Gundlupet main road Anjaneya Temple cleared at Chamarajanagar
ಇಲ್ಲಿನ ಕೆ.ಎಸ್.ನಾಗರತ್ನಮ್ಮ ಶಾಲಾ ಮುಂಭಾಗವಿದ್ದ ಆಂಜನೇಯ ದೇಗುಲವನ್ನು ರಸ್ತೆ ಅಗಲೀಕರಣ ದೃಷ್ಟಿಯಿಂದ ತಾಲೂಕು ಆಡಳಿತ ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಿತು. ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಕಳೆದ ನ. 27ರಂದು ಅಂದಿನ ಡಿಸಿಯಾಗಿದ್ದ ಬಿ.ಬಿ.ಕಾವೇರಿ ತೆರವುಗೊಳಿಸಲು ಆದೇಶಿಸಿದ್ದರು. ಅದರಂತೆ ಇಂದು ತೆರವುಗೊಳಿಸಲಾಗಿದೆ.
ಈ ಹಿಂದೆ ಗುಂಡ್ಲುಪೇಟೆಯಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಆದಿಯಾಗಿ ದೇಗುಲ ತೆರವುಗೊಳಿಸದಂತೆ ಹೋರಾಟ ಮಾಡಿದ್ದರು.