ಚಾಮರಾಜನಗರ:ಗುಜರಾತ್ ಮಾದರಿಯ ಸರ್ಕಾರ ರಾಜ್ಯದಿಂದಲೇ ಆರಂಭವಾಗಲಿದೆ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ಶಾಸಕ ಎನ್.ಮಹೇಶ್ ಭವಿಷ್ಯ ನುಡಿದರು. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ನ ಗೆಲುವು ಪ್ರಜಾಪ್ರಭುತ್ವದ ಗೆಲುವು, ಜನರ ಗೆಲುವು. ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳುತ್ತಿದ್ದ ವಿಪಕ್ಷದ ಆರೋಪಕ್ಕೆ ಗುಜರಾತ್ ಜನರು ಭರ್ಜರಿಯಾಗಿಯೇ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಗುಜರಾತ್ ಮಾಡೆಲ್ ಕರ್ನಾಟಕದಿಂದ ಆರಂಭ: ಶಾಸಕ ಮಹೇಶ್ - ಕೊಳ್ಳೇಗಾಲ ಶಾಸಕ ಎನ್ ಮಹೇಶ್
ಗುಜರಾತ್ ಮಾಡೆಲ್ಗೆ ಕರ್ನಾಟಕವೇ ಮೊದಲ ಹೆಜ್ಜೆ ಎಂದು ಶಾಸಕ ಎನ್.ಮಹೇಶ್ ಕೊಳ್ಳೇಗಾಲದಲ್ಲಿ ಹೇಳಿದರು.
ಕೊಳ್ಳೇಗಾಲ ಶಾಸಕ ಎನ್ ಮಹೇಶ್
ಕೊಳ್ಳೇಗಾಲಕ್ಕೆ ನಾನು ಆಕಾಂಕ್ಷಿಯಾಗಿದ್ದು ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಕೊಡದಿದ್ದರೆ ಟಿಕೆಟ್ ಪಡೆದವರ ಪರ ಕೆಲಸ ಮಾಡುತ್ತೇನೆ. ಎಲ್ಲವೂ ಹೈಕಮಾಂಡ್‌ಗೆ ಬಿಟ್ಟದ್ದು ಎಂದರು.
ಇದನ್ನೂ ಓದಿ:ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ, ಸಂದೇಹವೇ ಬೇಡ: ಸಚಿವ ಸುಧಾಕರ್
Last Updated : Dec 9, 2022, 8:10 PM IST