ಕರ್ನಾಟಕ

karnataka

ETV Bharat / state

ಬಂಡೀಪುರ ಕಾಡೊಳಗೆ ಆನೆ ಸತ್ತಿದ್ದನ್ನು ತಿಳಿಸಿದವು ಹದ್ದುಗಳು - Gopalaswamy Hill Forest Zone

ಹದ್ದುಗಳ ಹಾರಾಟದಿಂದಾಗಿ ಆನೆಯೊಂದು ಮೃತಪಟ್ಟಿರುವುದು ತಿಳಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿದೆ.

chamarajanagara
ಬಂಡೀಪುರ ಕಾಡೊಳಗೆ ಆನೆ ಸತ್ತಿದ್ದನ್ನು ತಿಳಿಸಿದವು ಹದ್ದುಗಳು

By

Published : Dec 11, 2019, 3:03 PM IST

ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕಾಡಿನೊಳಗೆ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.

ಕಲಿಗೌಡನಹಳ್ಳಿ ಬೀಟಿನ ತಾರೆಮರದ ಕೊಳಚಿ ಎಂಬಲ್ಲಿ ಅಂದಾಜು 50 ವರ್ಷದ ಗಂಡಾನೆ ಕಳೇಬರ ಪತ್ತೆಯಾಗಿದೆ. ವಯೋಸಹಜವಾಗಿ ಮೃತಪಟ್ಟಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದ್ದು, ಆನೆ ಮೃತಪಟ್ಟು 3-4 ದಿನಗಳು ಕಳೆದಿರಬಹುದು ಎಂದು ಮೂಲಗಳು ತಿಳಿಸಿವೆ.

ಹದ್ದುಗಳು ಹಾರಾಡುತ್ತಿದ್ದಿದ್ದನ್ನು ಗಮನಿಸಿದ ಸಿಬ್ಬಂದಿ ಸ್ಥಳಕ್ಕೆ ತೆರಳಿದ ವೇಳೆ ಆನೆ ಮೃತಪಟ್ಟಿರುವುದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದ್ದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.

ABOUT THE AUTHOR

...view details