ಚಾಮರಾಜನಗರ: ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪಿಎಸ್ಐ ಸೇರಿದಂತೆ ಐವರು ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಒಣಕನಪುರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಜಾತಿನಿಂದನೆ ಕೇಸ್ ಆರೋಪಿ ಸಿದ್ದರಾಜು ಎಂಬಾತನನ್ನು ಬಂಧಿಸಲು ತೆರಳಿದ್ದ ಬೇಗೂರು ಪಿಎಸ್ಐ ರಿಹಾನಾಬೇಗಂ, ಎಎಸ್ಐ ನಾಗರಾಜು, ಕಾನ್ಸ್ಟೇಬಲ್ಗಳಾದ ಗಣೇಶ್, ನಾಗೇಂದ್ರ ಹಾಗೂ ನಾಗೇಶ್ ಎಂಬುವರನ್ನು ಆರೋಪಿ ಸಂಬಂಧಿಕರು, ಸುತ್ತಮುತ್ತಲಿನ ಮನೆಯವರು ಎಳೆದಾಡಿ ಬೈದು ಹಲ್ಲೆ ನಡೆಸಿದ್ದಾರೆ.