ಚಾಮರಾಜನಗರ :ರಾಜ್ಯ ಸರ್ಕಾರದ ಬಹು ನಿರೀಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಬುಧವಾರ ಚಾಲನೆ ದೊರೆಯಲಿದ್ದು, ಈ ಯೋಜನೆ ಆರಂಭಕ್ಕೆ ಮಹಿಳೆಯೊಬ್ಬರು ಖುಷಿಯಿಂದ ಮನೆ ಮುಂದೆ ಗೃಹಲಕ್ಷ್ಮಿ ರಂಗೋಲಿ ಹಾಕಿ ಸಂಭ್ರಮಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮದ ವಿಜಯರಂಜಿನಿ ಎಂಬವರು ತಮ್ಮ ಮನೆ ಮುಂದೆ "ನಾನೇ ಗೃಹಲಕ್ಷ್ಮಿ" ಎಂದು ರಂಗೋಲಿ ಬಿಡಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಪ್ರತಿ ಕುಟುಂಬದ ಯಜಮಾನಿಗೆ 2000 ಹಣ ಕೊಡುವ ಯೋಜನೆ ಜಾರಿಯಾಗುತ್ತಿರುವ ಸಂತಸವನ್ನು ವಿಜಯರಂಜಿನಿ ರಂಗೋಲಿ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್ನು, ನಾನೇ ಗೃಹಲಕ್ಷ್ಮೀ ರಂಗೋಲಿ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಮರಾನಗರದಲ್ಲಿ ಗೃಹಲಕ್ಷ್ಮಿ ಯೋಜನೆ ರಂಗೋಲಿ 310 ಬಸ್ ಬುಕ್ :ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಕೆಎಸ್ಆರ್ಟಿಸಿ ಚಾಮರಾಜನಗರ ವಿಭಾಗದಿಂದ ಒಟ್ಟು 310 ಬಸ್ಗಳನ್ನು ಬುಕ್ ಮಾಡಲಾಗಿದೆ. 260 ಬಸ್ಗಳಲ್ಲಿ ಫಲಾನುಭವಿ ಮಹಿಳೆಯರು, ಉಳಿದ 50 ಬಸ್ಗಳಲ್ಲಿ ಪೊಲೀಸ್ ತುಕಡಿ, ಅಗ್ನಿಶಾಮಕ ಸಿಬ್ಬಂದಿಗಾಗಿ ಬುಕ್ ಮಾಡಲಾಗಿದೆ. ಚಾಮರಾಜನಗರ ವಿಭಾಗದಲ್ಲಿ ಒಟ್ಟು 510 ಬಸ್ಗಳಿದ್ದು ಇವುಗಳಲ್ಲಿ 310 ಬಸ್ಗಳು ಯೋಜನೆಯ ಚಾಲನೆ ಕಾರ್ಯಕ್ರಮಕ್ಕೆ ಬುಕ್ ಆಗಿರುವುದರಿಂದ ಸಾಮಾನ್ಯ ಪ್ರಯಾಣಕ್ಕೆ ತೊಂದರೆಯಾಗಲಿದೆ ಎಂಬ ಮಾಹಿತಿ ಇದೆ.
ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲ:ಶಕ್ತಿ ಯೋಜನೆ ಸ್ಥಗಿತಗೊಳ್ಳುತ್ತದೆ ಎಂದು ಇತ್ತೀಚಿಗೆ ಪ್ರಚಾರ ನಡೆದಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲ್ಲ. ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ :ಸರ್ಕಾರದ ವಿರುದ್ಧ 'ಕೈಕೊಟ್ಟ ಯೋಜನೆ, ಹಳಿ ತಪ್ಪಿದ ಆಡಳಿತ' ಹೆಸರಿನಲ್ಲಿ ಚಾರ್ಜ್ ಶೀಟ್ ಬಿಡುಗಡೆ ಮಾಡಿದ ಬಿಜೆಪಿ