ಚಾಮರಾಜನಗರ :ಜೂನ್ 8ರಿಂದ ದೇಗುಲ, ಮಾಲ್ ಒಳಗೊಂಡಂತೆ ಸಫಾರಿ, ಜಂಗಲ್ ಲಾಡ್ಜ್ ಕೂಡ ತೆರೆಯಬಹುದೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ ಹಲವು ನಿಬಂಧನೆಗಳನ್ನು ಹೇರಿದೆ.
ಈ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿ ಭಾರತದೊಂದಿಗೆ ಮಾತನಾಡಿ, ಈವರೆಗೂ ಸಫಾರಿ ಆರಂಭಕ್ಕೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಒಂದು ವೇಳೆ ಸಫಾರಿ ಆರಂಭಿಸಬೇಕೆಂದರೆ ಆಸನಗಳ ಸಂಖ್ಯೆ ಶೇ. 50ರಷ್ಟು ಕಡಿತವಾಗಲಿದೆ ಎಂದರು. ಜೊತೆಗೆ 10 ವರ್ಷದೊಳಗಿನ ಮಕ್ಕಳಿಗೆ ಹಾಗೂ 50 ವರ್ಷ ಮೇಲ್ಪಟ್ಟ ನಾಗರಿಕರು ಸಫಾರಿ ನಡೆಸಲು ನಿರ್ಬಂಧ ವಿಧಿಸಲಿದ್ದು, ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಳ್ಳಬೇಕಿದೆ.