ಚಾಮರಾಜನಗರ :ಹಸಿರು ಪಟಾಕಿ ಮಾರಾಟದ ಗೊಂದಲ ಏರ್ಪಟ್ಟು ಸೂಕ್ತ ಲೋಗೋ ಇಲ್ಲದ ಕಾರಣ ನಗರದ 9 ಪಟಾಕಿ ಅಂಗಡಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಲಿ ಬೀಗ ಹಾಕಿದ ಘಟನೆ ಸಂಜೆ ನಡೆಯಿತು.
ಬಿಡಿಯಾಗಿ ಪಟಾಕಿ ಮಾರುವಂತಿಲ್ಲ, ಪರಿಸರ ಸ್ನೇಹಿ ಪಟಾಕಿಗಳನ್ನಷ್ಟೇ ಮಾರಾಟ ಮಾಡುವುದು, ಸೂಕ್ತ ಸರ್ಟಿಫಿಕೇಟ್ ಇಲ್ಲದ ಮಾಲುಗಳನ್ನು ಮಾರಾಟ ಮಾಡಬಾರದು ಎಂಬ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಪೊಲೀಸರ ಸಮಕ್ಷಮದಲ್ಲಿ ಅಂಗಡಿಗಳಿಗೆ ಬೀಗ ಹಾಕಿಸಿದರು.