ಚಾಮರಾಜನಗರ : ಪಕ್ಕದ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೇರಿರುವ ವೀಕೆಂಡ್ ಕರ್ಫ್ಯೂನ ಮೊದಲ ದಿನವೇ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರ ಸಂಚಾರ ತೀರಾ ವಿರಳವಾಗಿದೆ.
ಸಾರಿಗೆ ಬಸ್ ನಲ್ಲಿನ ಪ್ರಯಾಣಿಕರು ತಕ್ಕಮಟ್ಟಿಗೆ ಮೈಸೂರು, ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಬಸ್ ಓಡಾಟ ಹೆಚ್ಚು ಕಂಡುಬರುತ್ತಿದೆ. ಹಾಲಿನ ಡೇರಿ, ದಿನಪತ್ರಿಕೆ ಅಂಗಡಿಗಳು, ಮೆಡಿಕಲ್ ಸ್ಟೋರ್ ಗಳಲ್ಲಿ ಮಾತ್ರ ಗ್ರಾಹಕರು ಕಂಡು ಬರುತ್ತಿದ್ದು ಹಣ್ಣು-ತರಕಾರಿ, ಮಾಂಸದಂಗಡಿ ವಹಿವಾಟು ನೆಲ ಕಚ್ಚಿದೆ. ಸದಾ ಗಿಜಿಗುಡುತ್ತಿದ್ದ ಮಾರ್ಕೆಟ್, ಅಂಗಡಿ ಬೀದಿಗಳು ಖಾಲಿ ಖಾಲಿಯಾಗಿವೆ.