ಚಾಮರಾಜನಗರ:ಮೊದಲ ಹಂತದಲ್ಲಿ ನಡೆಯುವ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಗ್ರಾಪಂ ಚುನಾವಣೆಯಲ್ಲಿ 1,241 ಸ್ಥಾನಗಳಿಗೆ 3,079 ಮಂದಿ ಕಣದಲ್ಲಿದ್ದಾರೆ. ಇವರಲ್ಲಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ 43 ಗ್ರಾಮ ಪಂಚಾಯತ್ಗಳ 742 ಸ್ಥಾನ, ಗುಂಡ್ಲುಪೇಟೆ ತಾಲೂಕಿನ 34 ಗ್ರಾಮ ಪಂಚಾಯತ್ಗಳ 499 ಸ್ಥಾನ ಸೇರಿ ಒಟ್ಟು 77 ಗ್ರಾಮ ಪಂಚಾಯತ್ಗಳ 1,241 ಸ್ಥಾನಗಳಿಗೆ 3,705 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 62 ನಾಮಪತ್ರ ತಿರಸ್ಕೃತಗೊಂಡರೆ 411 ಮಂದಿ ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದೆ ಸರಿದಿದ್ದಾರೆ. 62 ಮಂದಿ ಅವಿರೋಧ ಆಯ್ಕೆಯಲ್ಲಿ 40 ಕ್ಕೂ ಹೆಚ್ಚು ಮಂದಿ ಮಹಿಳೆಯರೇ ಸ್ಥಾನ ಪಡೆದಿರುವುದು ವಿಶೇಷವಾಗಿದೆ.