ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ ವೈಷಮ್ಯ: ಎರಡು ಗುಂಪುಗಳ ನಡುವೆ ಮಾರಾಮಾರಿ - ಷಣ್ಮುಗಸ್ವಾಮಿ ಗ್ರಾಪಂ ಸದಸ್ಯ

ಷಣ್ಮುಗಸ್ವಾಮಿ ಗ್ರಾಪಂ ಸದಸ್ಯನಾಗಿ ಆಯ್ಕೆಯಾಗಿದ್ದು, ಚುನಾವಣೆಯಲ್ಲಿ ಸೋತವರು ಮತ್ತು ಗೆದ್ದವರ ನಡುವೆ ಮಾತಿನ ಚಕಾಮಕಿ ಏರ್ಪಟ್ಟು ಪರಸ್ಪರ‌ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

grama-panchayat-election-issue-war-in-kollegala
ಗ್ರಾಪಂ ಚುನಾವಣೆ ವೈಷಮ್ಯ, ಎರಡು ಗುಂಪುಗಳ ನಡುವೆ ಮಾರಾಮಾರಿ

By

Published : Jan 2, 2021, 9:43 PM IST

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ ಚುನಾವಣೆಯ ಸೋಲು-ಗೆಲುವಿನ ವಿಚಾರಕ್ಕೆ ಮಾತಿಗೆ ಮಾತು‌ ಬೆಳೆದು ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಹೊಡೆದಾಡಿಕೊಂಡ ಘಟನೆ ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ನಡೆದಿದೆ.

ಗಲಾಟೆಯಲ್ಲಿ‌ ಶಿವಪ್ರಸಾದ್, ಮಹೇಶ್ ಹಾಗೂ ಷಣ್ಮುಗಸ್ವಾಮಿ, ಸಂದೇಶ ಎಂಬುವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಚಿಲಕವಾಡಿ ಗ್ರಾಮದಲ್ಲಿ ಷಣ್ಮುಗಸ್ವಾಮಿ ಹಾಗೂ ಮಲ್ಲೇಶ (ಪ್ರದೀಪ್) ಸ್ಪರ್ಧೆ ಮಾಡಿದ್ದರು.

ಓದಿ: ಗ್ರಾಪಂ ಫಲಿತಾಂಶ: ಸೋತವನಿಂದ ಗೆದ್ದವನ ಮೇಲೆ ಮಾರಣಾಂತಿಕ ಹಲ್ಲೆ

ಷಣ್ಮುಗಸ್ವಾಮಿ ಗ್ರಾಪಂ ಸದಸ್ಯನಾಗಿ ಆಯ್ಕೆಯಾಗಿದ್ದು, ಚುನಾವಣೆಯಲ್ಲಿ ಸೋತವರು ಮತ್ತು ಗೆದ್ದವರ ನಡುವೆ ಮಾತಿನ ಚಕಾಮಕಿ ಏರ್ಪಟ್ಟು ಪರಸ್ಪರ‌ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಎರಡೂ ಗುಂಪಿನವರು ಪರಸ್ಪರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details