ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ಕೊರೊನಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲಿ - ಕುಂತೂರು ಗ್ರಾಮ ಪಂಚಾಯಿತಿ

ಕಳೆದ 5 ದಿನಗಳ‌ ಹಿಂದೆಯಷ್ಟೇ ಉಸಿರಾಟದ ತೊಂದರೆಗೊಳಗಾಗಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆ ದಾಖಲಾಗಿದ್ದ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

kollegal
ಕೊರೊನಾಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಲಿ

By

Published : May 8, 2021, 1:33 PM IST

ಕೊಳ್ಳೇಗಾಲ:ಇಲ್ಲಿನ ಕುಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಪ್ರಸಾದ್ (44) ಕೊರೊನಾಗೆ ಬಲಿಯಾಗಿದ್ದಾರೆ.

ಕಳೆದ 5 ದಿನಗಳ‌ ಹಿಂದೆಯಷ್ಟೇ ಉಸಿರಾಟ ತೊಂದರೆಗೊಳಗಾಗಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆ ದಾಖಲಾಗಿದ್ದ ಇವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ, ಮೂರು ತಿಂಗಳಿನಿಂದ ಗ್ರಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾವಳಿಯಂತೆ ಸ್ವಗ್ರಾಮವಾದ ಮಲ್ಲಹಳ್ಳಿಮಾಳದಲ್ಲಿ ನೆರವೇರಿಸಲಾಯಿತು.

ಓದಿ:ಕಲಬುರಗಿಯಲ್ಲೂ ಬೆಡ್ ಬ್ಲಾಕಿಂಗ್ ದಂಧೆ.. ಪ್ರಿಯಾಂಕ್ ಖರ್ಗೆಗೆ ಬಂತು ಅನುಮಾನ

ABOUT THE AUTHOR

...view details