ಕರ್ನಾಟಕ

karnataka

ETV Bharat / state

ಸರ್ಕಾರಿ ಶಾಲೆಯಲ್ಲೇ ಕೋಳಿ ಫಾರಂ... ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರದಲ್ಲೊಂದು ಕರ್ಮಕಾಂಡ! - ಕೊಳ್ಳೇಗಾಲ ತಾಲೂಕಿನ ಮತ್ತಿಪುರ ಸರ್ಕಾರಿ ಶಾಲೆ

ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಹಲವಾರು ತಿಂಗಳುಗಳಿಂದ ಕೋಳಿಫಾರಂ ನಡೆಯುವ ಜೊತೆಗೆ ದವಸ-ಧಾನ್ಯಗಳು, ಬೈಕ್ ನಿಲ್ಲಿಸಿಕೊಳ್ಳುವ ಕೋಣೆಯಾಗಿ ಪರಿವರ್ತನೆಯಾಗಿದೆ.

school
school

By

Published : Aug 24, 2020, 2:19 PM IST

ಚಾಮರಾಜನಗರ: ಶಾಲೆಯೊಂದು ತೆರೆದರೆ ದೇಗುಲವೊಂದು ತೆರೆದಂತೆ ಎಂಬ ಮಾತನ್ನು ಇಲ್ಲಿ ಕೋಳಿಫಾರಂಗೆ ಜಾಗವಾದಂತೆ ಎಂದು ಬದಲಾಯಿಸಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಶಾಲೆಯಲ್ಲೇ ಕೋಳಿ ಫಾರಂ

ಕೊಳ್ಳೇಗಾಲ ತಾಲೂಕಿನ ಮತ್ತಿಪುರ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಹಲವಾರು ತಿಂಗಳುಗಳಿಂದ ಕೋಳಿಫಾರಂ ನಡೆಯುವ ಜೊತೆಗೆ ದವಸ-ಧಾನ್ಯಗಳು, ಬೈಕ್ ನಿಲ್ಲಿಸಿಕೊಳ್ಳುವ ಕೋಣೆಯಾಗಿ, ಸ್ಥಳೀಯ ಗ್ರಾ.ಪಂ ಸದಸ್ಯ ಕುಳ್ಳೇಗೌಡ ಎಂಬುವವರು ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಶಾಲೆಯಲ್ಲೇ ಕೋಳಿ ಫಾರಂ

ಜೆಡಿಯು ಮುಖಂಡ ಶಂಕರ್ ಮಂಡ್ಯ ಎಂಬವರು ಈ ಕರ್ಮಕಾಂಡ ಬಯಲಿಗೆಳೆದಿದ್ದು, ಗ್ರಾಪಂ ಸದಸ್ಯ ಕೋಳಿಫಾರಂ ನಡೆಸುತ್ತಿದ್ದ ಸಂಬಂಧ ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಲೆಯಲ್ಲೇ ಕೋಳಿ ಫಾರಂ

ಹಲವಾರು ತಿಂಗಳಿನಿಂದ ಕೋಳಿ ಸಾಕಿದ್ದರಿಂದ ಶಾಲೆ ಗಬ್ಬೆದ್ದು ಹೋಗಿದ್ದು, ಶಿಕ್ಷಣ ಸಚಿವರ ಉಸ್ತುವಾರಿ ಕ್ಷೇತ್ರದಲ್ಲೇ ಈ ಘಟನೆ ನಡೆದಿರುವುದು ವಿಪರ್ಯಾಸವೇ ಆಗಿದೆ‌.

ಶಾಲೆಯಲ್ಲೇ ಕೋಳಿ ಫಾರಂ

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೋಳಿ ಫಾರಂ ಆಗಿರುವ ಶಾಲೆಯನ್ನು ಮತ್ತೇ ಶಾಲೆಯಂತೆ ಪರಿವರ್ತಿಸಬೇಕಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಿದೆ.

ABOUT THE AUTHOR

...view details