ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಒಂದೇ ದಿನ 7 ಬಾಲ್ಯವಿವಾಹಕ್ಕೆ ತಯಾರಿ: ಎಲ್ಲ ಮದುವೆಗಳಿಗೆ ಅಧಿಕಾರಿಗಳಿಂದ ಬ್ರೇಕ್​ - ಮಕ್ಕಳ ಸಹಾಯವಾಣಿ

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಇಂಡಿಗನತ್ತ ಗ್ರಾಮದ ಕುಟುಂಬವೊಂದು 16 ವರ್ಷದ ಬಾಲೆಗೆ ದೇಗುಲವೊಂದರಲ್ಲಿ ಇಂದು ಮುಂಜಾನೆ 5 ಗಂಟೆಗೆ ಮದುವೆ ಮಾಡಲು ತಯಾರಿ ಮಾಡಿಕೊಂಡಿತ್ತು. ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮದುವೆ ನಿಲ್ಲಿಸಿದ್ದಾರೆ.

government officers stop seven child marraiges
government officers stop seven child marraiges

By

Published : Jun 15, 2020, 1:08 PM IST

ಚಾಮರಾಜನಗರ: ಒಂದೇ ದಿನ ಜಿಲ್ಲೆಯ ವಿವಿಧೆಡೆ ಬರೋಬ್ಬರಿ 7 ಬಾಲ್ಯವಿವಾಹ ನಡೆಸಲು ಪಾಲಕರು ಸಕಲ ತಯಾರಿ ಮಾಡಿಕೊಂಡಿದ್ದ ಘಟನೆ ನಡೆದಿದ್ದು, ಒಡಿಪಿ ಸಂಸ್ಥೆ ಎಲ್ಲಾ ಮದುವೆಗಳನ್ನು ನಿಲ್ಲಿಸಿದೆ.

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಇಂಡಿಗನತ್ತ ಗ್ರಾಮದ ಕುಟುಂಬವೊಂದು 16 ವರ್ಷದ ಬಾಲೆಗೆ ದೇಗುಲವೊಂದರಲ್ಲಿ ಇಂದು ಮುಂಜಾನೆ 5 ಗಂಟೆಗೆ ಮದುವೆ ಮಾಡಲು ತಯಾರಿ ಮಾಡಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮದುವೆ ನಿಲ್ಲಿಸಿದ್ದಾರೆ.

ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕಿಗೆ ವಿಜೃಂಭಣೆಯ ಮದುವೆ ಮಾಡುತ್ತಿರುವ ಮಾಹಿತಿ ಪಡೆದು ಅದನ್ನು ನಿಲ್ಲಿಸಿದ್ದಾರೆ. ಜೊತೆಗೆ, ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ 16 ವರ್ಷದ ಬಾಲಕಿಯ ಮದುವೆ, ವೈ.ಕೆ. ಮೋಳೆಯ 14 ವರ್ಷದ ಬಾಲೆಯ ವಿವಾಹ, ಅಮಚವಾಡಿ ಹಾಗೂ ಶೆಟ್ಟಿಹಳ್ಳಿಯ ಬಾಲ್ಯವಿವಾಹಗಳನ್ನು ಅಧಿಕಾರಿಗಳು ಇಂದು ನಿಲ್ಲಿಸಿದ್ದಾರೆ.

ಈ ತಿಂಗಳಿನಲ್ಲಿ 20 ಬಾಲ್ಯ ವಿವಾಹಗಳನ್ನು ನಿಲ್ಲಿಸಿದ್ದು, ಕಳೆದ ಮೇ ತಿಂಗಳಿನಲ್ಲಿ 18 ಬಾಲ್ಯ ವಿವಾಹ ಪ್ರಕರಣಗಳನ್ನು ಮಕ್ಕಳ ಸಹಾಯವಾಣಿ ನಿಲ್ಲಿಸಿದೆ. ಮೇ ನಲ್ಲಿ ಮೂರು ಬಾಲ್ಯವಿವಾಹ ನಡೆದಿದ್ದು, ಎರಡು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದ್ದವು. ಜಾಗೃತಿ ಮೂಡಿಸಿ ಮದುವೆಯನ್ನು ನಿಲ್ಲಿಸಿರುವುದರಿಂದ ಇಂದು ಮದುವೆ ಮಾಡುತ್ತಿದ್ದ 7 ಬಾಲಕಿಯರ ಪಾಲಕರ ವಿರುದ್ಧ ಒಡಿಪಿ ಸಂಸ್ಥೆ ದೂರು ನೀಡಿಲ್ಲ.

ABOUT THE AUTHOR

...view details