ಕರ್ನಾಟಕ

karnataka

ಹೊಗೆನಕಲ್ ಗೆ ಹೋಗೋದಿದ್ರೆ ಸ್ವಲ್ಪ ತಡೆಯಿರಿ.. ಕಾರಣ ಹೀಗಿದೆ

By

Published : Nov 9, 2019, 6:19 PM IST

ಸತತ ಮಳೆಗೆ ಎರಡು ವರ್ಷದ ಬಳಿಕ ಗೋಪಿನಾಥಂ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಹೊಗೆನಕಲ್ ರಸ್ತೆ ಮಾರ್ಗ ಮುಳುಗಡೆಯಾಗಿ ಪ್ರವಾಸಿಗರು ಪರದಾಡಿರುವ ಘಟನೆ ಇಂದು ನಡೆದಿದೆ.

ಕೋಡಿ ಬಿದ್ದ ಗೋಪಿನಾಥಂ ಡ್ಯಾಂ:‌ ಹೊಗೆನಕಲ್ ಗೆ ಹೋಗಲು ಪ್ರವಾಸಿಗರ ಪರದಾಟ!

ಚಾಮರಾಜನಗರ:ಸತತ ಮಳೆಗೆ ಎರಡು ವರ್ಷದ ಬಳಿಕ ಗೋಪಿನಾಥಂ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದಿರುವುದರಿಂದ ಹೊಗೆನಕಲ್ ರಸ್ತೆ ಮಾರ್ಗ ಮುಳುಗಡೆಯಾಗಿ ಪ್ರವಾಸಿಗರು ಪರದಾಡಿರುವ ಘಟನೆ ಇಂದು ನಡೆದಿದೆ.

ಕೋಡಿ ಬಿದ್ದ ಗೋಪಿನಾಥಂ ಡ್ಯಾಂ:‌ ಹೊಗೆನಕಲ್ ಗೆ ಹೋಗಲು ಪ್ರವಾಸಿಗರ ಪರದಾಟ!

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ‌ ಗೋಪಿನಾಥಂ ಡ್ಯಾಂ ಎರಡು ವರ್ಷದ ಬಳಿಕ ತುಂಬಿದ್ದು‌ ಶುಕ್ರವಾರ ಬಿದ್ದ ಜೋರು ಮಳೆಗೆ ಜಲಾಶಯದ ನೀರು ಹಳ್ಳಕೊಳ್ಳದ ಮೂಲಕ ರಸ್ತೆ ಮೇಲೆ ಹರಿಯುತ್ತಿರುವುದರಿಂದ 'ತೇಂಗಾಕೋಂಬು' ಎಂಬಲ್ಲಿ ಸಂಚಾರ ಬಂದ್ ಆಗಿದೆ. ವಾರಾಂತ್ಯದ ಮೋಜಿಗಾಗಿ ಹೊಗೆನಕಲ್ ಗೆ ತೆರಳುವ ಪ್ರವಾಸಿಗರು‌ ೩ ತಾಸುಗಳಿಂದ ರಸ್ತೆತುದಿಯಲ್ಲೇ ನಿಂತಿದ್ದಾರೆ. ಬೈಕ್ ಸವಾರಿ ಯಂತೂ ದುಸ್ಸಾಹಸವಾಗಿದ್ದು 3-4 ಮಂದಿ ಸಹಾಯದಿಂದ ಬೈಕ್ ನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ತರಲಾಗುತ್ತಿದೆ.

ABOUT THE AUTHOR

...view details