ಚಾಮರಾಜನಗರ: ಕೊರೊನಾ ನಿಯಂತ್ರಣಕ್ಕಾಗಿ ಭಾನುವಾರ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, ಜಿಲ್ಲಾದ್ಯಂತ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಡೇ ಲಾಕ್‌ಡೌನ್: ಮನೆಯಲ್ಲೇ ಲಾಕ್ ಆದ ಚಾಮರಾಜನಗರ ಜನ - ಚಾಮರಾಜನಗರ ಕೊರೊನಾ ಸೋಂಕಿತರ ಸಂಖ್ಯೆ
ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಾಗರಿಕರು ಸಂಡೇ ಲಾಕ್‌ಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
![ಸಂಡೇ ಲಾಕ್‌ಡೌನ್: ಮನೆಯಲ್ಲೇ ಲಾಕ್ ಆದ ಚಾಮರಾಜನಗರ ಜನ Chamrajnagar](https://etvbharatimages.akamaized.net/etvbharat/prod-images/768-512-11:25:52:1594533352-kn-cnr-01-lockdown-av-7202614-12072020094736-1207f-1594527456-102.jpg)
Chamrajnagar
ಔಷಧಿ ಅಂಗಡಿ, ಹಾಲು ಮಾರಾಟ ಕೇಂದ್ರ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಬಂದ್ ಆಗಿದ್ದು, ಬಸ್ ನಿಲ್ದಾಣ, ದೊಡ್ಡ ಅಂಗಡಿ ಬೀದಿ, ರಥದ ಬೀದಿ, ಹೌಸಿಂಗ್ ಬೋರ್ಡ್ ಕಾಲೋನಿ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿವೆ. ಆಟೋ ಹಾಗೂ ಇತರೆ ವಾಹನಗಳ ಸಂಚಾರವೂ ಸಹ ವಿರಳವಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಾಗರಿಕರು ಲಾಕ್‌ಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅನಗತ್ಯವಾಗಿ ಹೊರಗೆ ಬಂದ ಕೆಲವರಿಗೆ ಪೊಲೀಸರು ಬುದ್ದಿ ಹೇಳಿ ಮನೆಗೆ ಕಳುಹಿಸುತ್ತಿದ್ದಾರೆ.