ಕರ್ನಾಟಕ

karnataka

ETV Bharat / state

ಹಿಜಾಬ್​ಗಾಗಿ ಬಂದ್: ಚಾಮರಾಜನಗರ, ಮೈಸೂರು ಜಿಲ್ಲೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಂದ ವಾಣಿಜ್ಯ ಚಟುವಟಿಕೆ ಸ್ಥಗಿತ - ಮೈಸೂರು ಹಾಗೂ ಚಾಮರಾಜನಗರದಲ್ಲಿ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ ವರ್ತಕರು

ಫೆಡರೇಷನ್ ಆಫ್ ಮುಸ್ಲಿಂ ಆರ್ಗನೈಜೇಷನ್​ ವತಿಯಿಂದ ರಾಜ್ಯಾದ್ಯಂತ ನೀಡಿರುವ ಬಂದ್​ಗೆ ಮೈಸೂರು ಹಾಗೂ ಚಾಮರಾಜನಗರದಲ್ಲಿ ಬೆಂಬಲ ವ್ಯಕ್ತವಾಗಿದೆ.

ಹಿಜಾಬ್ ತೀರ್ಪಿನಿಂದ ಅಸಮಾಧಾನ
ಹಿಜಾಬ್ ತೀರ್ಪಿನಿಂದ ಅಸಮಾಧಾನ

By

Published : Mar 17, 2022, 3:32 PM IST

Updated : Mar 17, 2022, 4:42 PM IST

ಮೈಸೂರು/ಚಾ.ನಗರ :ರಾಜ್ಯ ಸರ್ಕಾರ ನಿರ್ಧಾರ ಹಾಗೂ ಹೈಕೋರ್ಟ್​ ನೀಡಿರುವ ಹಿಜಾಬ್​ ತೀರ್ಪಿಗೆ ಮುಸ್ಲಿಂ ಧರ್ಮಿಯರು ಅಸಮಾಧಾನ ವ್ಯಕ್ತಪಡಿಸಿ ಅಂಗಡಿಗಳನ್ನು ಬಂದ್ ಮಾಡಿ ಬಂದ್​​ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಹಾಗೆ ಚಾಮರಾಜನಗರದಲ್ಲಿ ಇದೇ ದೃಶ್ಯ ಕಂಡುಬಂತು.

ಫೆಡರೇಷನ್ ಆಫ್ ಮುಸ್ಲಿಂ ಆರ್ಗನೈಜೇಷನ್​ ವತಿಯಿಂದ ರಾಜ್ಯಾದ್ಯಂತ ನೀಡಿರುವ ಬಂದ್​ಗೆ ಮೈಸೂರಿನಲ್ಲಿರುವ ಸಾಡೇ ರಸ್ತೆ, ಮಂಡಿ ಮೊಹಲ್ಲಾ ಕಬೀರ್ ರಸ್ತೆ, ಉದಯಗಿರಿ ರಸ್ತೆ, ಕಲ್ಯಾಣಿ ಗಿರಿ ಸೇರಿದಂತೆ ವಿವಿಧೆಡೆ ಇರುವ ಮುಸ್ಲಿಂ ವ್ಯಾಪಾರ ಕೇಂದ್ರಗಳು ಹಾಗೂ ಅಂಗಡಿಗಳನ್ನು ಮುಚ್ಚಿ ಬಂದ್​ಗೆ ಬೆಂಬಲ ಸೂಚಿಸಿದರು.

ಮೈಸೂರು ಹಾಗೂ ಚಾಮರಾಜನಗರದಲ್ಲಿ ಬಂದ್​ಗೆ ಬೆಂಬಲ

ಇದನ್ನೂ ಓದಿ: ನೂರಾರು ಅಪರಾಧ ಪ್ರಕರಣ ಭೇದಿಸಿದ್ದ 10 ವರ್ಷದ‌ ಶ್ವಾನ ಸಾವು.. 'ರೇವಾ'ಗೆ ಪೊಲೀಸ್​ ಗೌರವ

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಅಂಗಡಿಗಳು ಬಂದ್ ಆಗಿರುವ ಕಡೆ ಗಸ್ತು ತಿರುಗಿದರು. ಅಲ್ಲದೇ, ಅಂಗಡಿ ಬಾಗಿಲಿಗೆ ಈ 'ವ್ಯಾಪಾರಿ ಹಿಜಾಬ್ ಪರ' ಎಂದು ಸ್ಟಿಕರ್ ಅಂಟಿಸಿದ್ದು ಕಂಡುಬಂತು.

ವ್ಯಾಪಾರಸ್ಥರಿಂದ ವಾಣಿಜ್ಯ ಚಟುವಟಿಕೆ ಸ್ಥಗಿತ:ಚಾಮರಾಜನಗರ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಿಂದ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಮರಾಜನಗರ ‌ಜಿಲ್ಲಾಕೇಂದ್ರ, ಗುಂಡ್ಲುಪೇಟೆ, ಹನೂರು,‌ ಕೌದಳ್ಳಿ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ವರ್ತಕರು, ಆಟೋ ಚಾಲಕರು ತಮ್ಮ ವಾಣಿಜ್ಯ ಚಟುವಟಿಕೆ ಬಂದ್ ಮಾಡಿ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಮೈಸೂರು ಹಾಗೂ ಚಾಮರಾಜನಗರದಲ್ಲಿ ಬಂದ್​ಗೆ ಬೆಂಬಲ

ತಾಲೂಕು, ಜಿಲ್ಲಾ ಮತ್ತು ಇನ್ನಿತರೆ ಮುಸ್ಲಿಂ ಕಮಿಟಿಗಳು, ಎಸ್​ಡಿಪಿಐ ಸಂಘಟನೆಗಳು ಬಂದ್​ಗೆ ಬೆಂಬಲ ವ್ಯಕ್ತಪಡಿಸಿವೆ. ಈರುಳ್ಳಿ ಸೇರಿದಂತೆ ವಾಣಿಜ್ಯ ಬೆಳೆ ವರ್ತಕರು, ಮಾಂಸದಂಗಡಿಗಳು, ಕೆಲವೊಂದು ಹೋಟೆಲ್​​ಗಳು, ದಿನಸಿ ಅಂಗಡಿಗಳನ್ನು ಮುಸ್ಲಿಂ ಧರ್ಮಿಯರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ.

Last Updated : Mar 17, 2022, 4:42 PM IST

ABOUT THE AUTHOR

...view details