ಕರ್ನಾಟಕ

karnataka

ETV Bharat / state

ಮೂರನೇ ವಾರದ ಸಂಡೇ ಲಾಕ್​​​ ಡೌನ್: ಚಾಮರಾಜನಗರ ಸಂಪೂರ್ಣ ಬಂದ್ - ಚಾಮರಾಜನಗರ ಕೊರೊನಾ ಸುದ್ದಿ

ಮೆಡಿಕಲ್ಸ್ ಮತ್ತು ಹಾಲು ಮಾರಾಟ ಹೊರತುಪಡಿಸಿ, ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿವೆ. ಕೆಎಸ್​ಆರ್​ಟಿಸಿ ಬಸ್ ಗಳು ಸಂಚಾರ ನಿಲ್ಲಿಸಿದ್ದರಿಂದ ಬಸ್ ನಿಲ್ದಾಣ ಖಾಲಿ-ಖಾಲಿಯಾಗಿದೆ.

ಮೂರನೇ ವಾರದ ಸಂಡೇ ಲಾಕ್​​​ ಡೌನ್
ಮೂರನೇ ವಾರದ ಸಂಡೇ ಲಾಕ್​​​ ಡೌನ್

By

Published : Jul 19, 2020, 11:55 AM IST

ಚಾಮರಾಜನಗರ:ರಾಜ್ಯ ಸರ್ಕಾರದ ನಿರ್ದೇಶನದಂತೆ ಕೈಗೊಳ್ಳುತ್ತಿರುವ ಪ್ರತಿ ಭಾನುವಾರದ ಲಾಕ್​ ಡೌನ್​ಗೆ ಮೂರನೇ ವಾರವೂ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಾಮರಾಜನಗರ ಸಂಪೂರ್ಣ ಬಂದ್

ಮೆಡಿಕಲ್ಸ್ ಮತ್ತು ಹಾಲು ಮಾರಾಟ ಕೇಂದ್ರ ಹೊರತುಪಡಿಸಿ, ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿವೆ. ಕೆಎಸ್​ಆರ್​ಟಿಸಿ ಬಸ್ ಗಳು ಸಂಚಾರ ನಿಲ್ಲಿಸಿದ್ದರಿಂದ ಬಸ್ ನಿಲ್ದಾಣ ಖಾಲಿ-ಖಾಲಿಯಾಗಿದೆ. ಖಾಸಗಿ ಬಸ್ ಗಳು, ಆಟೋಗಳು ರಸ್ತೆಗಿಳಿಯದಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿವೆ.

ಕಳೆದ ಎರಡು ಭಾನುವಾರವು ಕೂಡ ಗಡಿ ಜಿಲ್ಲೆಯ ಜನರು ಸಂಡೇ ಲಾಕ್​ಡೌನ್​​ ಗೆ ಉತ್ತಮ ಬೆಂಬಲ ನೀಡಿದ್ದರು.‌ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಿಸುತ್ತಿರುವುದು ಕೂಡ ಜನರ ಈ ಬೆಂಬಲಕ್ಕೆ ಕಾರಣ ಇರಬಹುದು‌.

ABOUT THE AUTHOR

...view details