ಚಾಮರಾಜನಗರ: ಶಾಸಕ ಎನ್.ಮಹೇಶ್ ಅವರ ಸ್ವಗ್ರಾಮವಾದ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಶಂಕನಪುರದಲ್ಲಿ ಗೋ ಬ್ಯಾಕ್ ಘೋಷಣೆ ಕೂಗಿ ಅವರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಕೊಳ್ಳೇಗಾಲ ನಗರಸಭೆಯ 26 ನೇ ವಾರ್ಡ್ ವ್ಯಾಪ್ತಿಗೆ ಶಂಕನಪುರ ಬರಲಿದೆ. ಶಾಲೆ, ಚರಂಡಿ, ರಸ್ತೆ ಸಮಸ್ಯೆ ಬಗ್ಗೆ ಶಾಸಕ ಮತ್ತು ಗ್ರಾಮಸ್ಥರು ಶನಿವಾರ ಸಭೆ ನಡೆಸಿದ್ದಾರೆ. ಈ ವೇಳೆ ರಾಜಕೀಯ ಕಾರಣಕ್ಕಾಗಿ ಶಾಸಕರು ಮಾತನಾಡುತ್ತಿದ್ದಾರೆ. ಯಾವ ಕಷ್ಟಗಳಿಗೂ ಸ್ಪಂದಿಸುತ್ತಿಲ್ಲ, ಯಾವುದಕ್ಕೂ ಪರಿಹಾರ ಕೊಡುತ್ತಿಲ್ಲ. ರಾಜಕೀಯ ಸ್ಟಂಟ್ ಮಾಡುತ್ತೀದ್ದೀರಿ, ಗೋ ಬ್ಯಾಕ್ ಮಹೇಶ್, ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.