ಕರ್ನಾಟಕ

karnataka

ETV Bharat / state

ಚಾಮರಾಜನಗರದ ಬೇಡಗುಳಿಯಲ್ಲಿ ಗರ್ಭಿಣಿಯಾದ ಬಾಲಕಿ: ದೇವಾಲಯದ ಪೂಜಾರಿ ಅರೆಸ್ಟ್​ - ಚಾಮರಾಜನಗರದಲ್ಲಿ ಬಾಲಕಿ ಮೇಲೆ ಪೂಜಾರಿ ಅತ್ಯಾಚಾರ

ಚಾಮರಾಜನಗರ ತಾಲೂಕಿನ ಬೇಡಗುಳಿ ಗ್ರಾಮದಲ್ಲಿ ದೇವಾಲಯದ ಪೂಜಾರಿಯೋರ್ವ ಸೋಲಿಗ ಸಮುದಾಯದ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, 17ರ ಬಾಲಕಿ ಈಗ ಗರ್ಭಿಣಿಯಾಗಿದ್ದಾಳೆ. ಈ ಸಂಬಂಧ ಆರೋಪಿ​ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

Girl gets pregnant by priest at Chamarajanagar
ಚಾಮರಾಜನಗರದಲ್ಲಿ ಬಾಲಕಿ ಮೇಲೆ ಪೂಜಾರಿ ಅತ್ಯಾಚಾರ

By

Published : Jan 24, 2022, 7:50 PM IST

ಚಾಮರಾಜನಗರ:ಪೂಜಾರಿ ಮಾತಿಗೆ ಮರುಳಾಗಿ ಸೋಲಿಗ ಸಮುದಾಯದ ಬಾಲಕಿಯೋರ್ವಳು ಗರ್ಭವತಿಯಾಗಿರುವ ಘಟನೆ ತಾಲೂಕಿನ ಬೇಡಗುಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 17ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಅದೇ ಗ್ರಾಮದ ಬಸವೇಶ್ವರ ದೇವಾಲಯ ಪೂಜಾರಿ ರವಿ(23) ಎಂಬಾತನನ್ನು ಮಹಿಳಾ ಠಾಣೆ ಪಿಐ ಪುಟ್ಟಸ್ವಾಮಿ ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ಬಾಲಕಿಯರ ಬಾಲಮಂದಿರದ ವಶಕ್ಕೆ ನೀಡಲಾಗಿದೆ.

ಪಿಡಿಒ, ಆಶಾ ಕಾರ್ಯಕರ್ತೆಯಿಂದ ಕೇಸ್​ ಬೆಳಕಿಗೆ:

ಆಶಾ ಕಾರ್ಯಕರ್ತೆ ಹಾಗೂ ಪಿಡಿಒ ಗ್ರಾಮದಲ್ಲಿ ಕೊರೊನಾ‌ ಜಾಗೃತಿ ಮೂಡಿಸುತ್ತಿದ್ದಾಗ ಬಾಲಕಿ ಕಣ್ಣಿಗೆ ಬಿದ್ದಿದ್ದಾಳೆ. ಹೊಟ್ಟೆ ದಪ್ಪವಾಗಿದ್ದರಿಂದ ವಯಸ್ಸು ಕೇಳಿದ್ದಾರೆ. ತನಗೆ 17 ವರ್ಷವಾಗಿದ್ದು, ತನಗಿನ್ನೂ ಮದುವೆಯಾಗಿಲ್ಲ ಎಂದು ಬಾಲಕಿ ಹೇಳುತ್ತಿದ್ದಂತೆ ಆಕೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: 31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?..ಇಲ್ಲಿದೆ ಲಿಸ್ಟ್​

ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ 7 ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದುಬಂದಿದೆ. ಕಾರಣ ಯಾರೆಂದು ವಿಚಾರಿಸಿದಾಗ ಅದೇ ಗ್ರಾಮದ ಪೂಜಾರಿ ರವಿ ಮರಳು ಮಾಡಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ವಿಷಯ ಬೆಳಕಿಗೆ ಬಂದಿದೆ. ಸದ್ಯ ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details