ಕರ್ನಾಟಕ

karnataka

ETV Bharat / state

ಚಾಮರಾಜನಗರ: ‘ಭೂರಕ್ಷ ಗಣಪತಿ’ ನಿಮಜ್ಜನ ಮೆರವಣಿಗೆ ಆರಂಭ.. ಬಿಗಿ ಪೊಲೀಸ್​​ ಬಂದೋಬಸ್ತ್​​​ - ದಲಿತರ ಬೀದಿಯಲ್ಲಿ ಗಣಪನಿಗೆ ಮೊದಲ ಪೂಜೆ

ಜಾನಪದ ಕಲಾತಂಡಗಳು, ಮಂಗಳವಾದ್ಯದ ಮೂಲಕ ಗಣಪತಿ ಮೆರವಣಿಗೆ ನಡೆಯುತ್ತಿದೆ. ದಲಿತರ ಬೀದಿಯಲ್ಲಿ ಗಣಪನಿಗೆ ಮೊದಲ ಪೂಜೆ ಸಲ್ಲಿಸಲಾಗಿದೆ. ಮೆರವಣಿಗೆಯುದ್ದಕ್ಕೂ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ..

ganpati-idol-immersion-starts-at-chamarajanagara-with-tightened-security
‘ಭೂರಕ್ಷ ಗಣಪತಿ’ ನಿಮಜ್ಜನ ಮೆರವಣಿಗೆ ಆರಂಭ..ಬಿಗಿ ಪೊಲೀಸ್​​ ಬಂದೋಬಸ್ತ್​​​

By

Published : Nov 1, 2021, 3:03 PM IST

ಚಾಮರಾಜನಗರ :ನಗರದ ಗಣೇಶ ನಿಮಜ್ಜನ ಕಾರ್ಯಕ್ಕೆ ಚಾಲನೆ ದೊರಕ್ಕಿದೆ. ಬೀದಿಗಳಲ್ಲಿ ಜನಸಾಗರವೇ ನೆರೆದಿದೆ. ಕೊರೊನಾ ನೆಪವೊಡ್ಡಿ ಗಣಪತಿ ನಿಮಜ್ಜನ ಮೆರವಣಿಗೆಗೆ ಚಾಮರಾಜನಗರ ಡಿಸಿ ಡಾ.ಎಂ.ಆರ್ ರವಿ ಅವಕಾಶ ನೀಡದಿದ್ದರಿಂದ ನಿಮಜ್ಜನ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.‌

ಕೊರೊನಾ ನಿಯಮ ಪಾಲನೆ ಷರತ್ತು ವಿಧಿಸಿ ಇಂದು ನಿಮಜ್ಜನ ಮೆರಣಿಗೆಗೆ ಅನುಮತಿ ಸಿಕ್ಕಿದ್ದರಿಂದ ರಥ ಬೀದಿಯಲ್ಲಿ‌ ಕೂರಿಸಿರುವ ‘ಭೂರಕ್ಷ ಗಣಪತಿ’ಯನ್ನು ನಗರದ್ಯಾಂತ ಮೆರವಣಿಗೆ ಮಾಡಿ ಮನೆಗೊಬ್ಬರು ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಾರ್ಯಕ್ರಮಕ್ಕೆ ವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದ್ದಾರೆ.

‘ಭೂರಕ್ಷ ಗಣಪತಿ’ ನಿಮಜ್ಜನ ಮೆರವಣಿಗೆ ಆರಂಭ.. ಬಿಗಿ ಪೊಲೀಸ್​​ ಬಂದೋಬಸ್ತ್..​​​

ಜಾನಪದ ಕಲಾತಂಡಗಳು, ಮಂಗಳವಾದ್ಯದ ಮೂಲಕ ಗಣಪತಿ ಮೆರವಣಿಗೆ ನಡೆಯುತ್ತಿದೆ. ದಲಿತರ ಬೀದಿಯಲ್ಲಿ ಗಣಪನಿಗೆ ಮೊದಲ ಪೂಜೆ ಸಲ್ಲಿಸಲಾಗಿದೆ. ಮೆರವಣಿಗೆಯುದ್ದಕ್ಕೂ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

3 ಮಂದಿ ಡಿವೈಎಸ್​​​​ಪಿ, 7 ಮಂದಿ ಸಿಪಿಐ, 19 ಮಂದಿ ಪಿಎಸ್ಐ, 50 ಮಂದಿ ಎಎಸ್ಐ, 400 ಮಂದಿ ಪೊಲೀಸ್ ಕಾನ್ಸ್​ಟೇಬಲ್​​, 5 ಕೆಎಸ್ಆರ್​​ಪಿ ತುಕುಡಿ, 7 ಡಿಆರ್ ಹಾಗೂ 300 ಮಂದಿ ಗೃಹರಕ್ಷಕದಳ ಸಿಬ್ಬಂದಿ ನಿಯೋಜಿಸಲಾಗಿದೆ. ಜೊತೆಗೆ ಮೆರವಣಿಗೆ ತೆರಳುವ ಮಾರ್ಗದುದ್ದಕ್ಕೂ ಶ್ವಾನದಳ ಮತ್ತು ಬಾಂಬ್ ಶೋಧ ಪಡೆ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ.‌

ಇದನ್ನೂ ಓದಿ:ಪುನೀತ್‌ರಂತೆ ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಸಾವಿಗೆ ಶರಣಾದ ಅಭಿಮಾನಿ

ABOUT THE AUTHOR

...view details