ಚಾಮರಾಜನಗರ: ಅರಣ್ಯ ಇಲಾಖೆಯ ಸ್ಥಳದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಘಟನೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ದೇಗುಲ ಸಮೀಪದಲ್ಲೇ ನಡೆದಿದೆ.
ಬಿಳಿಗಿರಿರಂಗನ ಬೆಟ್ಟದ ಅರಣ್ಯ ಭೂಮಿಯಲ್ಲಿ ಗಾಂಜಾ ಫಸಲು..! - ganja crop
ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪಿಐ ಮಹಾದೇವಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಅರಣ್ಯ ಭೂಮಿಯಲ್ಲಿ ಬೆಳೆದಿದ್ದ 13.6 ಕೆಜಿಯ 65 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಫಸಲು
ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪಿಐ ಮಹಾದೇವಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ ಅರಣ್ಯ ಭೂಮಿಯಲ್ಲಿ ಬೆಳೆದಿದ್ದ 13.6 ಕೆಜಿಯ 65 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಅರಣ್ಯ ಭೂಮಿಯಲ್ಲಿ 65 ಗಿಡಗಳು ಬೆಳೆದಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗಾಗಲಿ, ಸಂಬಂಧಪಟ್ಟ ಅಧಿಕಾರಿಗಳಿಗಾಗಲಿ ತಿಳಿಯದಿದ್ದುದು ವಿಪರ್ಯಾಸವಾಗಿದೆ. ಇನ್ನು, ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ನಿಗಾ ಇಟ್ಟಿದ್ದು ಬಂಧಿಸಲು ಬಲೆ ಬೀಸಿದ್ದಾರೆ ಎಂದು ಈಟಿವಿ ಭಾರತಕ್ಕೆ ಮೂಲಗಳು ತಿಳಿಸಿವೆ.