ಗುಂಡ್ಲುಪೇಟೆ:ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದ 11 ಮಂದಿಯನ್ನು ಪಟ್ಟಣದ ಪೊಲೀಸರು ಬಂಧಿಸಿ, 3450 ರೂ. ವಶಪಡಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ; ಜೂಜಾಟ ಆಡುತ್ತಿದ್ದ 11 ಮಂದಿ ಅಂದರ್ - ಗುಂಡ್ಲುಪೇಟೆ ಚಾಮರಾಜನಗರ ಲೆಟೆಸ್ಟ್ ನ್ಯೂಸ್
ಭೀಮನಬೀಡು ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದ ನಾಗಶೆಟ್ಟಿ, ಕೃಷ್ಣ, ಮಣಿಕಂಠ, ಬಸವ ಮಹೇಶ, ಮಹದೇವಶೆಟ್ಟಿ, ಗೋವಿಂದ ಶೆಟ್ಟಿ, ಸಂಪತ್ ಕುಮಾರ್, ಸ್ವಾಮಿ, ಮಹದೇವ ಎಂಬುವರನ್ನು ಪೊಲೀಸರು ಬಂಧಿಸಿ ಅವರಿಂದ 3450 ರೂ. ವಶಪಡಿಸಿಕೊಂಡಿದ್ದಾರೆ.

ನಾಗಶೆಟ್ಟಿ, ಕೃಷ್ಣ, ಮಣಿಕಂಠ, ಬಸವ ಮಹೇಶ, ಮಹದೇವಶೆಟ್ಟಿ, ಗೋವಿಂದ ಶೆಟ್ಟಿ, ಸಂಪತ್ ಕುಮಾರ್, ಸ್ವಾಮಿ, ಮಹದೇವ ಜೂಜಾಟ ಆಡುತ್ತಿದ್ದವರು. ಇವರು ಗ್ರಾಮದ ಉಪ್ಪಾರ ಸಮುದಾಯದ ಭವನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಜೂಜು ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂಜು ಆಡುತ್ತಿದ್ದವರೆಲ್ಲ ಕೂಲಿ ಕಾರ್ಮಿಕರಾಗಿದ್ದು, ದುಡಿದ ಹಣವನ್ನು ಜೂಜಿನಲ್ಲೇ ಕಳೆಯುತ್ತಿದ್ದಾರೆ. ಇದೇ ರೀತಿ ತಾಲೂಕಿನ ಅನೇಕ ಕಡೆಗಳಲ್ಲಿ ಜೂಜು ನಡೆಯುತ್ತಿದೆ. ಪೊಲೀಸರಿಗೆ ಈ ವಿಷಯ ತಿಳಿದಿದ್ದರೂ ಕೂಡಾ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ನೀಡಿ ಜೂಜು ನಿಲ್ಲಿಸಬೇಕು ಎಂದು ಸಾರ್ವಜನಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.