ಚಾಮರಾಜನಗರ:ಕಳೆದ 10 ದಿನಗಳಲ್ಲಿ ಗುಂಡ್ಲುಪೇಟೆ ಪೊಲೀಸರು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ, 26 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಅಕ್ರಮ ಜೂಜಾಟ: 10 ದಿನದಲ್ಲಿ 26 ಮಂದಿ ವಿರುದ್ಧ ಪ್ರಕರಣ! - ಅಕ್ರಮ ಜೂಜಾಟ
ಗುಂಡ್ಲುಪೇಟೆ ಭಾಗದಲ್ಲಿ ಜೂಜುಕೋರರು ಸಾರ್ವಜನಿಕ ಪ್ರದೇಶಗಳಲ್ಲೇ ಜೂಜಾಡುತ್ತಿದ್ದವರ ಮೇಲೆ ಗುಂಡ್ಲುಪೇಟೆ ಪೊಲೀಸರಿಂದ ದಾಳಿ. 26 ಮಂದಿ ವಿರುದ್ಧ ಪ್ರಕರಣ ದಾಖಲು.
![ಗುಂಡ್ಲುಪೇಟೆಯಲ್ಲಿ ಅಕ್ರಮ ಜೂಜಾಟ: 10 ದಿನದಲ್ಲಿ 26 ಮಂದಿ ವಿರುದ್ಧ ಪ್ರಕರಣ! gambling-in-gundlupet-26-case-registered](https://etvbharatimages.akamaized.net/etvbharat/prod-images/768-512-6064256-thumbnail-3x2-inspit.jpg)
ಗುಂಡ್ಲುಪೇಟೆಯಲ್ಲಿ ಅಕ್ರಮ ಜೂಜಾಟ
ಜಿಲ್ಲೆಯ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಗುಂಡ್ಲುಪೇಟೆ ಭಾಗದಲ್ಲಿ ಜೂಜುಕೋರರು ಸಾರ್ವಜನಿಕ ಪ್ರದೇಶಗಳಲ್ಲೇ ಜೂಜು ಆಡುವಾಗ ಗುಂಡ್ಲುಪೇಟೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 26 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಅಕ್ರಮ ಜೂಜಾಟ
ಗುಂಡ್ಲುಪೇಟೆ ಪಟ್ಟಣ, ಹೊಂಗಳ್ಳಿ, ದೇವರಹಳ್ಳಿಯ 5 ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ ಜೂಜುಕೋರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾಳು ಬಿದ್ದ ಮನೆಗಳು, ದೇವಾಲಯ, ಖಾಸಗಿ ಜಮೀನುಗಳೇ ಜೂಜುಕೋರರ ಅಡ್ಡೆಯಾಗಿವೆ.