ಚಾಮರಾಜನಗರ:ಸಂಕಷ್ಟದ ಕಾಲದಲ್ಲೂ ಪಡಿತರ ಫಲಾನುಭವಿಗಳಿಗೆ ಮೋಸ ಮಾಡುತ್ತಿದ್ ಆರೋಪದ ಮೇಲೆ 10 ನ್ಯಾಯಬೆಲೆ ಅಂಗಡಿಗಳನ್ನ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ಮೋಸ ಆರೋಪ: ಚಾಮರಾಜನಗರ ಜಿಲ್ಲೆಯಲ್ಲಿ 10 ನ್ಯಾಯಬೆಲೆ ಅಂಗಡಿ ಅಮಾನತು - ಚಾಮರಾಜನಗರ ಸುದ್ದಿ
ತೂಕ ವ್ಯತ್ಯಾಸ, ಪಡಿತರರಿಂದ ಐದರಿಂದ ಹತ್ತು ರೂಪಾಯಿ ವಸೂಲಿ, ಕಡಿಮೆ ಪ್ರಮಾಣದ ಪಡಿತರ ವಿತರಣೆ ಕುರಿತು ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ,10 ನ್ಯಾಯಬೆಲೆ ಅಂಗಡಿಗಳನ್ನ ಅಮಾನತುಪಡಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲೂ ಮೋಸ: 10 ನ್ಯಾಯಬೆಲೆ ಅಂಗಡಿ ಅಮಾನತು
ಜಿಲ್ಲೆಯ ವಿವಿಧ ಹತ್ತು ಪಡಿತರ ಕೇಂದ್ರಗಳಲ್ಲಿ ತೂಕ ವ್ಯತ್ಯಾಸ, ಪಡಿತರರಿಂದ ಐದರಿಂದ ಹತ್ತು ರೂಪಾಯಿ ವಸೂಲಿ, ಕಡಿಮೆ ಪ್ರಮಾಣದ ಪಡಿತರ ವಿತರಣೆ ಕುರಿತು ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ, ಕೊಳ್ಳೆಗಾಲ ತಾಲೂಕಿನ 5, ಯಳಂದೂರು 2, ಚಾಮರಾಜನಗರ ತಾಲೂಕಿನ 3 ಪಡಿತರ ಕೇಂದ್ರಗಳ ಅಮಾನತು ಮಾಡಲಾಗಿದೆ.
ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶ 2016ರ ಅನ್ವಯ ಅಮಾನತು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.