ಕರ್ನಾಟಕ

karnataka

ETV Bharat / state

ಹಣ ಕಟ್ಟಿದವರಿಗೆ ಸಾಲ ನೀಡದೆ ಮೀನಮೇಷ : ಫೈನಾನ್ಸ್ ಕಂಪನಿ ವಿರುದ್ಧ ವಂಚನೆ ಆರೋಪ - ಫೈನಾನ್ಸ್ ಕಂಪನಿ ವಿರುದ್ಧ ವಂಚನೆ ಆರೋಪ

ಸಾಲ ಕೊಡುವುದಾಗಿ ಹಣ ಕಟ್ಟಿಸಿಕೊಂಡು ಈಗ ಸಾಲ ನೀಡದೆ ಸತಾಯಿಸುತ್ತಿದೆ, ಈ ಮೂಲಕ ಮೋಸ ಮಾಡಿದೆ ಎಂದು ಗುಂಡ್ಲುಪೇಟೆಯ ಫೈನಾನ್ಸ್ ಕಂಪನಿ ವಿರುದ್ಧ ಜನರು ಆರೋಪಿಸಿದ್ದಾರೆ.

fraud allegation against finance company
ಗುಂಡ್ಲುಪೇಟೆಯ ಫೈನಾನ್ಸ್ ಕಂಪನಿ ವಿರುದ್ಧ ವಂಚನೆ ಆರೋಪ

By

Published : Oct 12, 2020, 9:38 PM IST

ಚಾಮರಾಜನಗರ :ಖಾಸಗಿ ಫೈನಾನ್ಸ್ ಕಂಪನಿಯೊಂದು ಜನರ ಬಳಿ ಹಣ ಕಟ್ಟಿಸಿಕೊಂಡು ಪಂಗನಾಮ ಹಾಕಿರುವ ಆರೋಪ ಕೇಳಿ ಬಂದಿದೆ.

ಗುಂಡ್ಲುಪೇಟೆಯ ಸುರಭಿ ಹೋಟೆಲ್ ಬಳಿ ಇರುವ ಎಸ್​ವಿಎಸ್ ಎಂಬ ಖಾಸಗಿ ಫೈನಾನ್ಸ್ ಕಂಪನಿ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಜನರಿಂದ ಹಣ ಕಟ್ಟಿಸಿಕೊಂಡು ಸಾಲ ಕೊಡಲು ಇಂದು- ನಾಳೆ ಎಂದು ಅಲೆದಾಡಿಸುತ್ತಿದೆ ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ ನೂರಾರು ಮಂದಿ ಸಾಲ ಪಡೆಯಲು ಜಮಾಯಿಸಿದ ವೇಳೆ ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಕಚೇರಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ ಜನ

ಎಸ್​ವಿಎಸ್ ಕಂಪನಿಗೆ ಹಲವಾರು ಜನ 2 ಸಾವಿರದಿಂದ 50 ಸಾವಿರವರೆಗೆ ಹಣ ಕಟ್ಟಿದ್ದಾರೆ. ಇಂತಿಷ್ಟು ಸಾವಿರ ಹಣವನ್ನು ಕಟ್ಟಿದರೆ ಲಕ್ಷದವರೆಗೆ ಸಾಲ ನೀಡುವುದಾಗಿ ಎಸ್​ವಿಎಸ್ ಕಂಪನಿ ಹೇಳಿತ್ತು ಎನ್ನಲಾಗಿದೆ. ಈಗ ಸಾಲ ನೀಡದೆ ಅಲೆದಾಡಿಸುತ್ತಿದೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಎಸ್​ವಿಎಸ್ ಪೈನಾನ್ಸ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಂಪನಿಯ ಎಂಡಿ ಶಿವರಾಜ್ ಎಂಬಾತ ಮೈಸೂರು ಮೂಲದವನು ಎಂಬುವುದು ಗೊತ್ತಾಗಿದೆ. ಪೊಲೀಸರು ಆತನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.

ABOUT THE AUTHOR

...view details