ಚಾಮರಾಜನಗರ: ವೈಶಾಖ ಬುದ್ಧ ಪೂರ್ಣಿಮೆಯ ಪ್ರಯುಕ್ತ ಸಾರನಾಥ ಬುದ್ಧ ವಿಹಾರದಲ್ಲಿ ಮಕ್ಕಳೊಂದಿಗೆ 14 ಮಂದಿ ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು. ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ದ ವಿಹಾರದಲ್ಲಿ ಭಾರತೀಯ ಬೌದ್ದ ಮಹಾಸಭಾದ ವತಿಯಿಂದ 2566ನೇ ವೈಶಾಖ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಾಮರಾಜನಗರ: ಬುದ್ಧ ಪೂರ್ಣಿಮೆಯ ದಿನ ಬೌದ್ಧ ಧರ್ಮ ಸ್ವೀಕರಿಸಿದ 14 ಮಂದಿ - ಬೌದ್ಧ ಧರ್ಮ ಸ್ವೀಕಾರ
ಚಾಮರಾಜನಗರ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬುದ್ಧ ವಿಹಾರದಲ್ಲಿ ಸೋಮವಾರ ನಡೆದ ವೈಶಾಖ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ 14 ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.
ಬುದ್ಧ ಪೂರ್ಣಿಮಾ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಬುದ್ಧನ ಬೋಧನೆಗಳು ಮತ್ತು ಬೌದ್ಧ ಧರ್ಮ ಒಪ್ಪಿಕೊಂಡು ವಕೀಲ ಪ್ರಸನ್ನ ಕುಮಾರ್ ಮತ್ತು ಕುಟುಂಬ, ಕಾಗಲವಾಡಿ ಡಾ.ಶಿವಕುಮಾರ್, ಕರಿನಂಜನಪುರ ಮಹದೇವಯ್ಯ ಚಾಮರಾಜನಗರ ಮಣಿಕಂಠ ಹಾಗೂ ಕುಟುಂಬ, ದಡದಹಳ್ಳಿ ಶಂಕರ್ ಬೌದ್ದ ಧರ್ಮ ದೀಕ್ಷೆ ಪಡೆದರು. ಬೌದ್ಧ ಪಠಣ, ಧ್ಯಾನ, ಪ್ರವಚನ ಮತ್ತು ಬೌದ್ಧ ದೀಕ್ಷಾ ಕಾರ್ಯಕ್ರಮವನ್ನು ನಾಗಪುರ ಭಂತೇ ತಿಸ್ಸಾ ನಡೆಸಿಕೊಟ್ಟರು.